×
Ad

ಪುಣೆ: ಪ್ರಧಾನಿ ಕಾರ್ಯಕ್ರಮದಲ್ಲಿ ʼಕಪ್ಪು ಬಣ್ಣದʼ ಮಾಸ್ಕ್‌, ಸಾಕ್ಸ್‌, ವಸ್ತ್ರಗಳಿಗೆ ಅವಕಾಶ ನಿರಾಕರಣೆ; ವರದಿ

Update: 2022-03-07 16:28 IST
Photo: Twitter

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ  ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದ ಪುಣೆಯ ಎಂಐಟಿ ಕಾಲೇಜು ಕ್ಯಾಂಪಸ್  ಪ್ರವೇಶಿಸಿದ್ದ ಜನರಲ್ಲಿ  ಅವರ ಮಾಸ್ಕ್ ಗಳು, ಸಾಕ್ಸ್ ಹಾಗೂ  ಕಪ್ಪು ಬಣ್ಣದ ಶರ್ಟ್ಗಳನ್ನು ಕೂಡ  ತೆಗೆದುಹಾಕಲು ತಿಳಿಸಲಾಗಿತ್ತು.ಯಾವುದೇ ಪ್ರತಿಭಟನೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿದ ಪುಣೆ ಪೊಲೀಸ್ ಕಮಿಷನರ್ ಅಮಿತಾಭ್ ಗುಪ್ತಾ, ಕಪ್ಪು ಬಾವುಟಕ್ಕೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿತ್ತು ಎಂದರು.  "ಕಪ್ಪು ಧ್ವಜಗಳು ಹಾಗೂ  ಕಪ್ಪು ಬಟ್ಟೆಯ ತುಂಡುಗಳ ಬಗೆಗಿನ  ಸೂಚನೆಗಳಲ್ಲಿ  ಕೆಲವು ಗೊಂದಲಗಳಾಗಿರಬೇಕು. ಬಟ್ಟೆಯ ಬಗ್ಗೆ ಗೊಂದಲವಿರಲಿಲ್ಲ’’ ಎಂದು  ಗುಪ್ತಾ ಹೇಳಿದರು.

ಸ್ಥಳದಲ್ಲಿ ಭದ್ರತಾ ಕಾರ್ಯದಲ್ಲಿದ್ದವರು ತನ್ನ  ಕಪ್ಪು ಬಣ್ಣದ ಮಾಸ್ಕ್ ಅನ್ನು ತೆಗೆದುಹಾಕಲು ಕೇಳಿಕೊಂಡರು ಎಂದು ಈವೆಂಟ್ ಅನ್ನು ವರದಿ ಮಾಡಿದ ಪತ್ರಕರ್ತ ಮಂಗೇಶ್ ಫಾಲ್ಲೆ ಹೇಳಿದರು.

ಒಂದು ದಿನದ ಭೇಟಿಗಾಗಿ ನಗರಕ್ಕೆ ಬಂದಿದ್ದ ಪ್ರಧಾನಿ ಅವರು ಮೆಟ್ರೋ ರೈಲಿನ ವಿಸ್ತರಣೆ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರಿಗೆ ಸಮರ್ಪಿತ ಗ್ಯಾಲರಿ ಹಾಗೂ  ಸಿಂಬಯಾಸಿಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆಗಳನ್ನು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News