ಆಕ್ಲಂಡ್: ಹೋಳಿ ಹಬ್ಬ ಆಚರಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ
Update: 2022-03-19 08:16 IST
ಆಕ್ಲಂಡ್: ಸದ್ಯ ನ್ಯೂಝಿಲ್ಯಾಂಡ್‌ನಲ್ಲಿ ಐಸಿಸಿ ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾಗವಹಿಸಿರುವ ಭಾರತದ ಮಹಿಳಾ ತಂಡ ಆಸ್ಟ್ರೇಲಿಯ ವಿರುದ್ಧ ಪಂದ್ಯಕ್ಕೆ ಮುನ್ನಾದಿನ ಶುಕ್ರವಾರ ಆಕ್ಲಂಡ್‌ನಲ್ಲಿ ಹೋಳಿ ಹಬ್ಬವನ್ನು ಆಚರಿಸಿದೆ.
ಟೀಮ್ ಇಂಡಿಯಾ ನ್ಯೂಝಿಲ್ಯಾಂಡ್‌ನಿಂದ ಎಲ್ಲರಿಗೂ ಹೋಳಿ ಶುಭಾಶಯಗಳನ್ನು ಕೋರುತ್ತಿದೆ. ಹೋಳಿ ಹಬ್ಬವು ಸಂತೋಷದ ಸಂಕೇತವಾಗಿದೆ. ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯವಾಗಿದೆ ಎಂದು ಬಣ್ಣದ ಹಬ್ಬವನ್ನು ಆಚರಿಸಿದ ಬಳಿಕ ಆಟಗಾರ್ತಿಯರು ಒಟ್ಟಾಗಿರುವ ಚಿತ್ರದೊಂದಿಗೆ ಬಿಸಿಸಿಐ ಟ್ವೀಟಿಸಿದೆ.
ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತವು ಶನಿವಾರ ಆಸ್ಟ್ರೇಲಿಯದ ಸವಾಲನ್ನು ಎದುರಿಸಲಿದೆ. ಭಾರತ ಈ ತನಕ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿದ್ದು ಈ ಪೈಕಿ ಎರಡರಲ್ಲಿ ಜಯ ಹಾಗೂ ಎರಡರಲ್ಲಿ ಸೋಲುಂಡಿದೆ.