×
Ad

ಉತ್ತರಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯ ಮೇಲೆ ಇಬ್ಬರಿಂದ ಹಲ್ಲೆ: ವೀಡಿಯೊ ವೈರಲ್

Update: 2022-03-29 14:36 IST

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಜೇವರ್‌ ಪ್ರದೇಶದಲ್ಲಿ  ವಿಕಲಚೇತನ ವ್ಯಕ್ತಿಯ ಮೇಲೆ ಪುರುಷ ಹಾಗೂ  ಮಹಿಳೆಯರಿಬ್ಬರು ಸೇರಿಕೊಂಡು   ಕೋಲುಗಳಿಂದ ಹಲ್ಲೆ ನಡೆಸುತ್ತಿರುವ  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿರುವ ಇಬ್ಬರು ಸಂಬಂಧಿಕರಾಗಿದ್ದು, ಆಸ್ತಿ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಕೂಟರ್‌ನಲ್ಲಿ ಕುಳಿತಿದ್ದ ವಿಕಲಚೇತನ ಗಜೇಂದ್ರ, ಕೋಲಿನ ಹೊಡೆತದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ವೀಡಿಯೊದಲ್ಲಿ ಕಂಡುಬಂದಿದೆ. ಪುರುಷ, ಮಹಿಳೆಯರಿಬ್ಬರೂ ಗಜೇಂದ್ರನ ವಾಹನವನ್ನು  ಕೋಲಿನಿಂದ ಬಡಿದು ಜಖಂಗೊಳಿಸಿದ್ದಾರೆ.

ಗಜೇಂದ್ರ ತನ್ನ ಸಂಬಂಧಿ ಜುಗೇಂದ್ರನಿಂದ ಶಾಲೆಯನ್ನು ಬಾಡಿಗೆಗೆ ಪಡೆದಿದ್ದನು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಯನ್ನು ಮುಚ್ಚಿದ್ದರಿಂದ, ಜುಗೇಂದ್ರ ಅದನ್ನು ಬಾಡಿಗೆಗೆ ನೀಡಿದ್ದ. ಈ ವಿಚಾರವಾಗಿ ಇಬ್ಬರ  ನಡುವೆ ವಾಗ್ವಾದ ನಡೆದಿದೆ.

ರವಿವಾರ ಇಬ್ಬರು  ಪರಸ್ಪರ ದೈಹಿಕ ಹಲ್ಲೆಗೆ ಮುಂದಾದ  ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಬಳಿ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News