×
Ad

ಪಂದ್ಯದಲ್ಲಿ ಸೋತ ಬಳಿಕ ಅಭಿಮಾನಿಯ ಕೈಯಲ್ಲಿದ್ದ ಮೊಬೈಲ್‌ ಕಿತ್ತೆಸೆದ ಕ್ರಿಸ್ಟಿಯಾನೊ ರೊನಾಲ್ಡೊ

Update: 2022-04-10 12:30 IST

ಮ್ಯಾಡ್ರಿಡ್: ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಎವರ್ಟನ್ ವಿರುದ್ಧ 1-0 ಗೋಲುಗಳಿಂದ ಸೋತ ನಂತರ ಮೈದಾನದಿಂದ ಹೊರ ಹೋಗುವಾಗ ಫುಟ್ಬಾಲ್ ಅಭಿಮಾನಿಯೊಬ್ಬನ ಕೈಯಿಂದ ಮೊಬೈಲ್ ಫೋನ್ ಅನ್ನು ಕಸಿದು ಬಿಸಾಡಿರುವುದಕ್ಕೆ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಶನಿವಾರ ಕ್ಷಮೆಯಾಚಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವೀಡಿಯೊ ಹರಿದಾಡಲಾರಂಭಿದೆ.  ಪೋರ್ಚುಗಲ್ ಸ್ಟಾರ್ ರೊನಾಲ್ಡೊ ಗುಡಿಸನ್ ಪಾರ್ಕ್‌ನಲ್ಲಿನ  ಸುರಂಗದ ಕಡೆಗೆ ಹೋಗುತ್ತಿರುವಾಗ ಎವರ್ಟನ್ ಬೆಂಬಲಿಗನೊಂದಿಗೆ  ಘರ್ಷಣೆಯಲ್ಲಿ ತೊಡಗಿರುವುದು ಕಂಡುಬಂದಿದೆ.

 "ನಾವು ಎದುರಿಸುತ್ತಿರುವಂತಹ ಕಷ್ಟದ ಕ್ಷಣಗಳಲ್ಲಿ ಭಾವನೆಗಳನ್ನು ನಿಭಾಯಿಸುವುದು ಎಂದಿಗೂ ಸುಲಭವಲ್ಲ. ಆದಾಗ್ಯೂ, ನಾವು ಯಾವಾಗಲೂ ಗೌರವಯುತವಾಗಿರಬೇಕು, ತಾಳ್ಮೆಯಿಂದಿರಬೇಕು ಹಾಗೂ  ಸುಂದರವಾದ ಆಟವನ್ನು ಪ್ರೀತಿಸುವ ಎಲ್ಲಾ ಯುವಕರಿಗೆ ಮಾದರಿಯಾಗಬೇಕು. ನನ್ನ ವರ್ತನೆಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಹಾಗೂ  ಸಾಧ್ಯವಾದರೆ  ಓಲ್ಡ್ ಟ್ರಾಫರ್ಡ್‌ನಲ್ಲಿ ಕ್ರೀಡಾ ಮನೋಭಾವದ ಸಂಕೇತವಾಗಿ ಪಂದ್ಯವನ್ನು ವೀಕ್ಷಿಸಲು ನಾನು ಈ ಬೆಂಬಲಿಗನನ್ನು ಆಹ್ವಾನಿಸಲು ಬಯಸುತ್ತೇನೆ’’ ಎಂದು 37ರ ವಯಸ್ಸಿನ ರೊನಾಲ್ಡೊ Instagram ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News