ಜುಲೈ 1ರಿಂದ ಪಂಜಾಬ್ ನಲ್ಲಿ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್: ಆಮ್ ಆದ್ಮಿ ಪಕ್ಷ ಘೋಷಣೆ

Update: 2022-04-16 17:25 GMT

 ಚಂಡೀಗಢ,ಎ.16: ಪಂಜಾಬಿನಲ್ಲಿ ಪ್ರತಿಯೊಂದು ಮನೆಗೂ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯಲಿದೆಯೆಂದು ಮುಖ್ಯಮಂತ್ರಿ ಭಗವಂತ್‌ ಸಿಂಗ್ ಮಾನ್ ಶನಿವಾರ ಘೋಷಿಸಿದ್ದಾರೆ.

     ಪರಿಶಿಷ್ಟ ಜಾತಿಗಳು, ಹಿಂದುಳಿದ ಜಾತಿಗಳು, ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಾಗೂ ಸ್ವಾತಂತ್ರ ಯೋಧರು ಪ್ರಸಕ್ತ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯುತ್ತಿದ್ದು, ಇನ್ನು ಮುಂದೆ ಅವರು ತಮ್ಮ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯಲಿದ್ದಾರೆ. ಈ ಕುಟುಂಬಗಳ ವಿದ್ಯುತ್ ಬಳಕೆಯು ಎರಡು ತಿಂಗಳುಗಳಲ್ಲಿ 600 ಯೂನಿಟ್‌ ಗಿಂತ ಅಧಿಕವಾದಲ್ಲಿ , ಆಗ ಅವರಿಗೆ ಮಿತಿಯನ್ನು ಮೀರಿದ ಯೂನಿಟ್‌ ಗಳಿಗೆ ಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಮಾನ್ ತಿಳಿಸಿದ್ದಾರೆ.

 ಆದರೆ ಇತರ ಕುಟುಂಬಗಳ ವಿದ್ಯುತ್ ಬಳಕೆಯು ಎರಡು ತಿಂಗಳುಗಳಲ್ಲಿ 600 ಯೂನಿಟ್‌ ಗಿಂತ ಅಧಿಕವಾಗಿದ್ದಲ್ಲಿ ಆಗ ಗ್ರಾಹಕರು ಒಟ್ಟು ವಿದ್ಯುತ್ ಬಳಕೆಯ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದಕ್ಕಿಂತಲೂ ಹೆಚ್ಚಾಗಿ, ಒಂದು ವೇಳೆ ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರ ವಿದ್ಯುತ್ ಶುಲ್ಕದಲ್ಲಿಯೂ ಯಾವುದೇ ಹೆಚ್ಚಳ ಇರುವುದಿಲ್ಲ ಮತ್ತು ರೈತ ಸಮುದಾಯಕ್ಕೆ ಕೃಷಿ ಕಾರ್ಯಗಳಿಗಾಗಿ ಉಚಿತ ವಿದ್ಯುತ್ ಪೂರೈಕೆ ಮುಂದುವರಿಯಲಿದೆ ಎಂದರು.

  ಪ್ರತಿಯೊಂದು ಕುಟುಂಬಕ್ಕೂ 300 ಯೂನಿಟ್‌ ಗಳಷ್ಟು ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಇತ್ತೀಚೆಗೆ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

   ರಾಜ್ಯದಲ್ಲಿ ಪ್ರತಿಯೊಂದು ಕುಟುಂಬಕ್ಕೂ 300 ಯೂನಿಟ್ ಉಚಿತ ವಿದ್ಯುತ್ತನ್ನು ಒದಗಿಸುವ ಪಂಜಾಬ್ ಸರಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಆರವಿಂದ್ ಕೇಜ್ರಿವಾಲ್ ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ. ಇತರ ರಾಜಕೀಯ ಪಕ್ಷಗಳ ಹಾಗೆ ಎಎಪಿಯು ಸುಳ್ಲು ಭರವಸೆಗಳಲ್ಲಿ ನೀಡುವುದಿಲ್ಲವೆಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News