ತುರ್ತು ಸನ್ನಿವೇಶದ ತರಂಗಾಂತರ ಬಳಸಿ 7 ಇಂಡಿಗೋ ಪೈಲಟ್ಗಳಿಂದ ನಿಂದನಾತ್ಮಕ ಸಂಭಾಷಣೆ

Update: 2022-04-28 18:33 GMT

 ಹೊಸದಿಲ್ಲಿ,ಎ.28:ವೇತನ ಸಮಸ್ಯೆಯ ವಿಚಾರವಾಗಿ ಕನಿಷ್ಠ ಏಳು ಮಂದಿ ಪೈಲಟ್ಗಳು ವಿಮಾನಗಳಲ್ಲಿ ತುರ್ತು ಸನ್ನಿವೇಶದಲ್ಲಿ ಬಳಸಲಾಗುವ ತರಂಗಾಂತರವನ್ನು ಬಳಸಿಕೊಂಡು ನಿಂದನಾತ್ಮಕ ಪಗಳೊಂದಿಗೆ ಸಂಭಾಷಣೆ ನಡೆಸಿರುವುದು ಪತ್ತೆಯಾಗಿದೆಯೆಂದು ಗುರುವಾರ ಮೂಲಗಳು ತಿಳಿಸಿವೆ.

  ಈ ಪೈಲಟ್ಗಳು 121.5 Mhz ತರಂಗಾತರವನ್ನು ಬಳಸಿಕೊಂಡು ಸಂವಹನ ನಡೆಸಿದ್ದು, ತಮಗೆ ಕಡಿಮೆ ವೇತನ ದೊರೆಯುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಗ, ಅಸಭ್ಯ ಪದಗಳನ್ನು ಬಳಸಿದ್ದಾರೆನ್ನಲಾಗಿದೆ. 121.5 Mhz ತರಂಗಾಂತರವನ್ನು ವಿಮಾನವು ಅಪತ್ತಿನ ಸನ್ನಿವೇಶವನ್ನು ಎದುರಿಸುತ್ತಿದ್ದಾಗ ತುರ್ತು ಸಂವಹನಕ್ಕಾಗಿ ಮಾತ್ರ ಬಳಸಲಾಗುತ್ತದೆ.
   
121.5 ‌Mhz ತರಂಗಾಂತರದ ಮೇಲೆ ವಿಮಾನವು ಹಾರಾಡುತ್ತಿರುವ ಪರಿಸರದಲ್ಲಿರುವ ವಾಯು ಸಂಚಾರ ನಿಯಂತ್ರಕರು ನಿಗಾವಿರಿಸುತ್ತಾರೆ. ಸಾಮಾನ್ಯವಾಗಿ ಬೇರೆ ಬೇರೆ ವಿಮಾನಗಳಲ್ಲಿರುವ ಪೈಲಟ್ಗಳು ಪರಸ್ಪರ ಸಂವಹನ ನಡೆಸಲು 123.45 Mhz ತರಂಗಾಂತರವನ್ನು ಬಳಸುತ್ತಿದ್ದು, ಅದರ ಮೇಲೆ ವಾಯುಯಾನ ನಿಯಂತ್ರಕರು ನಿಗಾವಿರಿಸುವುದಿಲ್ಲ.
  ಕೊರೋನಾ ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ಇಂಡಿಗೋ ಏರ್ಲೈನ್ ತನ್ನ ಪೈಲಟ್ಗಳ ವೇತನವನ್ನು ಶೇ. 30ರಷ್ಟು ಕಡಿಮೆಗೊಳಿಸಿತ್ತು. ಎಪ್ರಿಲ್ 1ರಂದು ಇಂಡಿಗೋ ಏರ್ಲೈನ್ಸ್ ತನ್ನ ಪೈಲಟ್ಗಳ ವೇತನದಲ್ಲಿ ಶೇ.8ರಷ್ಟು ಏರಿಕೆ ಮಾಡಲು ನಿರ್ಧರಿಸಿತ್ತು. ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾದ ಇದ್ದಲ್ಲಿ ಇನ್ನೂ ಶೇ.6.5 ಶೇಕಡ ವೇತನ ಏರಿಕೆಯನ್ನು ನವೆಂಬರ್ ತಿಂಗಳಲ್ಲಿ ಜಾರಿಗೊಳಿಸುವುದಾಗಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News