×
Ad

ಜ್ಞಾನವ್ಯಾಪಿ ಮಸೀದಿ ಪ್ರಕರಣ: ಸರ್ವೇ ಅಧಿಕಾರಿಯನ್ನು ಬದಲಾಯಿಸಬೇಕೆಂಬ ಅರ್ಜಿಯ ವಿರುದ್ಧ ನ್ಯಾಯಾಲಯದ ಮೊರೆ

Update: 2022-05-09 13:52 IST

ಲಕ್ನೊ:  ಸಮೀಕ್ಷೆ ನಡೆಸಲು ನ್ಯಾಯಾಲಯದಿಂದ ರವಿವಾರ ನೇಮಕಗೊಂಡ ಅಡ್ವಕೇಟ್  ಕಮಿಷನರ್ ಅಜಯ್ ಕುಮಾರ್ ಅವರನ್ನು ತೆಗೆದು ಹಾಕಲು ಅಥವಾ ಬದಲಿಸಲು ಕೋರಿರುವ ಮನವಿಯನ್ನು ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ದೇಗುಲ ಪ್ರಕರಣದ ಅರ್ಜಿದಾರರು ವಿರೋಧಿಸುವುದಾಗಿ ಹೇಳಿದ್ದಾರೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ. .

ಅರ್ಜಿದಾರರಾದ ಐವರು ಮಹಿಳೆಯರು  ಈ ಪ್ರಕರಣದಲ್ಲಿ ಶೃಂಗಾರ್ ಗೌರಿ ದೇವತೆಯ ಚಿತ್ರವು ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿ ಅಸ್ತಿತ್ವದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಸ್ಥಳದಲ್ಲಿ ಪ್ರತಿದಿನ ಪ್ರಾರ್ಥನೆ ಸಲ್ಲಿಸಲು ಮತ್ತು ಇತರ ಹಿಂದೂ ಆಚರಣೆಗಳನ್ನು ವೀಕ್ಷಿಸಲು ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಎಪ್ರಿಲ್ 8 ರಂದು ಸ್ಥಳೀಯ ನ್ಯಾಯಾಲಯವು ಕುಮಾರ್ ಅವರನ್ನು ಅಡ್ವಕೇಟ್  ಕಮಿಷನರ್ ಆಗಿ ನೇಮಿಸಿ, ಸೈಟ್ ಸಮೀಕ್ಷೆ ಹಾಗೂ  ವೀಡಿಯೊಗ್ರಾಫ್ ಮಾಡಲು ಸೂಚಿಸಿತ್ತು.

ಮೇ 6 ರಂದು, ಸ್ಥಳದಲ್ಲಿ ಸಮೀಕ್ಷೆ ನಡೆಸಲಾಯಿತು, ಆದರೆ ಮಸೀದಿಯ ಉಸ್ತುವಾರಿ ಅಂಜುಮನ್ ಇಂತಿಝಾಮಿಯಾ ಮಸ್ಜಿದ್ ಕಮಿಟಿ ಸಮೀಕ್ಷೆಯನ್ನು ಆಕ್ಷೇಪಣೆ ಸಲ್ಲಿಸಿದ್ದಾರೆ.  ಮರುದಿನ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಡ್ವಕೇಟ್  ಕಮಿಷನರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ವಜಾಗೊಳಿಸಬೇಕು ಎಂದು ಕಮಿಟಿ ಒತ್ತಾಯಿಸಿದೆ.

ವ್ಯವಸ್ಥಾಪಕ ಸಮಿತಿಯ ಆಕ್ಷೇಪಣೆಗಳ ವಿರುದ್ಧ ಸೋಮವಾರ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸುವುದಾಗಿ ಅರ್ಜಿದಾರರ ವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News