×
Ad

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಇಳಿಕೆ

Update: 2022-05-09 14:11 IST

 ಹೊಸದಿಲ್ಲಿ:  ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತದ ನಡುವೆ ಇಂದು ಬೆಳಗ್ಗೆ ಭಾರತೀಯ ರೂಪಾಯಿ ಮೌಲ್ಯ  ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡು ರೂ 77.42 ತಲುಪಿದೆ.

ವಿದೇಶಿ ವಿನಿಮಯ  ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಡಾಲರ್ ಎದುರು  ರೂಪಾಯಿ ಮೌಲ್ಯ ಆರಂಭದಲ್ಲಿ ರೂ 77.17 ಆಗಿತ್ತು. ನಂತರದ ಅವಧಿಯಲ್ಲಿ ಕಳೆದ ಶುಕ್ರವಾರ ಮುಕ್ತಾಯ ಮೌಲ್ಯಕ್ಕಿಂತ ಇನ್ನೂ 52 ಪೈಸೆ ಇಳಿಕೆ ಕಂಡಿತ.

ಇಂದು ಅಮೆರಿಕಾದ ನಾಸ್ಡಾಕ್, ಟೋಕಿಯೋದ ನಿಕ್ಕೀ ಮತ್ತು ಹಾಂಗ್‍ಕಾಂಗ್‍ನ  ಮಾರುಕಟ್ಟೆಗಳಲ್ಲೂ ಷೇರು ಮೌಲ್ಯಗಳಲ್ಲಿ ಕುಸಿತ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News