ಗಾಂಜಾ ಜಾಲಕ್ಕೆ ಹದಿಹರೆಯದವರೇ ಗುರಿ

Update: 2022-05-09 18:02 GMT

ಮಾನ್ಯರೇ,

ರಾಜ್ಯದಲ್ಲಿ ದಿನೇ ದಿನೇ ಗಾಂಜಾದ ಘಮಲು ಹೆಚ್ಚಾಗುತ್ತಿದ್ದು, ಪೆಡ್ಲರ್‌ಗಳು ಹದಿಹರೆಯದವರನ್ನೇ ಹೆಚ್ಚು ಗುರಿ ಮಾಡಿ ಹಲವು ಜಿಲ್ಲೆಗಳ ನಗರ ಭಾಗಗಳಲ್ಲೇ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿಷ್ಠಿತ ಶಾಲಾ-ಕಾಲೇಜುಗಳ ಸುತ್ತ-ಮುತ್ತ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, 15 ರಿಂದ 19 ವರ್ಷದೊಳಗಿನ ವಿದ್ಯಾರ್ಥಿಗಳೇ ಈ ಅಮಲಿಗೆ ಬಲಿಯಾಗುತ್ತಿದ್ದಾರೆ.

ಪೆಡ್ಲರ್‌ಗಳು ವಿದ್ಯಾರ್ಥಿಗಳಿಗೆ ಮೊದಲು ಕಡಿಮೆ ಬೆಲೆಗೆ ಗಾಂಜಾ ಮಾರಾಟ ಮಾಡಿ ಖಯಾಲಿ ಆದ ನಂತರ ದುಬಾರಿ ಬೆಲೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಈ ಚಟಕ್ಕೆ ಬಿದ್ದ ವಿದ್ಯಾರ್ಥಿಗಳು ಎಷ್ಟೇ ದುಬಾರಿಯಾದರೂ ಖರೀದಿಸಲು ಪೋಷಕರಿಗೆ ಹಣ ಕೊಡುವಂತೆ ಪೀಡಿಸಿ ಹಣ ಕೀಳುತ್ತಿದ್ದಾರೆ. ಅಷ್ಟೇ ಅಲ್ಲದೆ ನಶೆ ಏರಿದ ಮೇಲೆ ವೇಗವಾಗಿ ಬೈಕ್ ಓಡಿಸುವುದು, ರಸ್ತೆಯಲ್ಲಿ ಓಡಾಡುವವರ ಬಳಿ ಅಸಭ್ಯವಾಗಿ ವರ್ತಿಸುವುದು ಮತ್ತು ಕಾರಣವಿಲ್ಲದೆ ಗಲಾಟೆ ಮಾಡಿಕೊಂಡು ಅಮಲಿನಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆೆ. ಇಂತಹ ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆಯು ಶೀಘ್ರವೇ ಎಚ್ಚೆತ್ತುಕೊಂಡು ನಗರದ ಶಾಲಾ-ಕಾಲೇಜುಗಳತ್ತ ಗಮನ ಹರಿಸಿ, ಪೆಡ್ಲರ್‌ಗಳನ್ನು ಮಟ್ಟಹಾಕಲು ಗಡಿ ಪ್ರದೇಶಗಳಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಬೇಕಾಗಿದೆ.

Writer - ಮನೋಜ್ ರಾಜ್, ಶಿವಮೊಗ್ಗ

contributor

Editor - ಮನೋಜ್ ರಾಜ್, ಶಿವಮೊಗ್ಗ

contributor

Similar News