ಲಡಾಖ್‌ ಬಳಿ ʼಬೃಹತ್‌‌ʼ ಎರಡನೇ ಸೇತುವೆಯನ್ನು ಕಟ್ಟಿಸುತ್ತಿರುವ ಚೀನಾ: ಉಪಗ್ರಹ ಚಿತ್ರಗಳಿಂದ ಬಹಿರಂಗ

Update: 2022-05-19 05:45 GMT
Photo: Twitter.com/@detresfa_

ಹೊಸದಿಲ್ಲಿ: ಪೂರ್ವ ಲಡಾಖ್‌ನ ಪ್ರಮುಖ ಪ್ಯಾಂಗೊಂಗ್ ತ್ಸೋ ಸರೋವರದ ಸುತ್ತಲೂ ಚೀನಾವು "ಬೃಹತ್" ಎರಡನೇ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ಉಪಗ್ರಹ ಚಿತ್ರಗಳಿಂದ ಬಹಿರಂಗವಾಗಿದೆ. ಜನರ ಪ್ರಕಾರ, ಈ ಸೇತುವೆಯು ಈ ಪ್ರದೇಶದಲ್ಲಿ ತನ್ನ ಸೈನಿಕರನ್ನು ತ್ವರಿತವಾಗಿ ಸಜ್ಜುಗೊಳಿಸಲು ಚೀನಾದ ಮಿಲಿಟರಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

ಎರಡು ವರ್ಷಗಳಿಂದ ಪೂರ್ವ ಲಡಾಖ್‌ನ ಹಲವಾರು ವಿವಾದಾತ್ಮಕ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ದೀರ್ಘಕಾಲದ ಬಿಕ್ಕಟ್ಟಿನ ನಡುವೆಯೂ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.

ಹೊಸ ನಿರ್ಮಾಣದ ಬಗ್ಗೆ ಭಾರತೀಯ ರಕ್ಷಣಾ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಕಂಡುಬಂದಿಲ್ಲ.

ಆಗಸ್ಟ್ 2020 ರಲ್ಲಿ ಚೀನಾದ ಪಡೆಗಳು ಈ ಪ್ರದೇಶದಲ್ಲಿ ಬೆದರಿಸಲು ಪ್ರಯತ್ನಿಸಿದ ನಂತರ ಭಾರತೀಯ ಪಡೆಗಳು ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಹಲವಾರು ಆಯಕಟ್ಟಿನ ಶಿಖರಗಳನ್ನು ವಶಪಡಿಸಿಕೊಂಡಿತ್ತು. ಇದರ ನಂತರ ಚೀನಾ ತನ್ನ ಮಿಲಿಟರಿ ಮೂಲಸೌಕರ್ಯವನ್ನು ಬಲಪಡಿಸುವತ್ತ ಗಮನಹರಿಸುತ್ತಿದೆ.

ಭಾರತ ಕೂಡ ಸೇನಾ ಸನ್ನದ್ಧತೆಯನ್ನು ಹೆಚ್ಚಿಸುವ ಒಟ್ಟಾರೆ ಪ್ರಯತ್ನಗಳ ಭಾಗವಾಗಿ ಗಡಿ ಪ್ರದೇಶಗಳಲ್ಲಿ ಸೇತುವೆಗಳು, ರಸ್ತೆಗಳು ಮತ್ತು ಸುರಂಗಗಳನ್ನು ನಿರ್ಮಿಸುತ್ತಿದೆ. ಈ ಪ್ರದೇಶದಲ್ಲಿ ಚೀನಾ ಇತ್ತೀಚೆಗೆ ಮೊದಲ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ.

ಮೇಲೆ ಉಲ್ಲೇಖಿಸಿದ ಜನರು, ಹೊಸ ಸೇತುವೆಯನ್ನು ವಾಸ್ತವಿಕ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) 20 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ. LAC ಉದ್ದಕ್ಕೂ ಚೀನೀ ಚಟುವಟಿಕೆಗಳ ಮೇಲೆ ನಿಗಾ ಇಡುವ ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಸಂಶೋಧಕ ಡೇಮಿಯನ್ ಸೈಮನ್, ಹೊಸ ನಿರ್ಮಾಣದ ಉಪಗ್ರಹ ಚಿತ್ರಗಳನ್ನು Twitter ನಲ್ಲಿ ಪೋಸ್ಟ್ ಮಾಡಿದ್ದಾರೆ.

@detresfa_ ಹ್ಯಾಂಡಲ್ ಅನ್ನು ಬಳಸುವ ಸೈಮನ್, ಮೊದಲ ಸೇತುವೆಗೆ ಸಮಾನಾಂತರವಾಗಿ "ದೊಡ್ಡ ಸೇತುವೆಯನ್ನು" ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದು, ಸರೋವರದ ಮೇಲೆ ಮಿಲಿಟರಿ ನಿಯಂತ್ರಣವನ್ನು ತರುವುದೇ ಸಂಭಾವ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News