ಗಾಂಜಾ ಸೇವನೆ ಆರೋಪ : ಮೂವರು ವಶಕ್ಕೆ
Update: 2022-05-24 20:56 IST
ಉಡುಪಿ : ಗಾಂಜಾ ಸೇವನೆಗೆ ಸಂಬಂಧಿಸಿ ಮೇ 23ರಂದು ಉಡುಪಿ ಸೆನ್ ಹಾಗೂ ಕಾಪು ಪೊಲೀಸರು ಒಟ್ಟು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಉದ್ಯಾವರ ಸಂಪಿಗೆನಗರದ ದೀಪಕ್ ರೈ(22) ಹಾಗೂ ಕಾರ್ಕಳ ಹೊಸ್ಮಾರು ನಿವಾಸಿ ಮುಹಮ್ಮದ್ ಇರ್ಷಾದ್(25) ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅದೇ ರೀತಿ ಕಾಪು ಪೊಲೀಸರು ಮಲ್ಲಾರು ಗ್ರಾಮದ ಸ್ವಾಗತ ನಗರ ಸಮೀಪ ಶಬರೀಶ ಎಂಬಾತನನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಮೇ ೨೪ರಂದು ವೈದ್ಯರ ದೃಢ ಪತ್ರ ದಲ್ಲಿ ಇವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.