ಪತಿ, ಮೈದುನ, ಮಾವನಿಂದ ಲೈಂಗಿಕ ದೌರ್ಜನ್ಯ: ಹಿಂದು ಮಹಾಪಂಚಾಯತ್ ಆಯೋಜಕನ ಪತ್ನಿಯಿಂದ ದೂರು ದಾಖಲು

Update: 2022-05-28 11:16 GMT
photo: twitter

ಹೊಸದಿಲ್ಲಿ : ದ್ವೇಷದ ಭಾಷಣಗಳಿಗೆ ಸುದ್ದಿಯಾದ ಹಿಂದು ಮಹಾಪಂಚಾಯತ್‍ನಂತಹ ಕಾಯಕ್ರಮಗಳನ್ನು ಆಯೋಜಿಸಿರುವ ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಪ್ರೀತ್ ಸಿಂಗ್, ಆತನ ತಂದೆ ಹಾಗೂ ಆತನ ಸಹೋದರ ತನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿ ಸಿಂಗ್‍ನ 32 ವರ್ಷದ ಪತ್ನಿ ನಿತ್ಯಾ  ಪೊಲೀಸ್ ದೂರು ನೀಡಿದ್ದಾರೆ ಎಂದು newslaundry ವರದಿ ಮಾಡಿದೆ.

ಜಂತರ್ ಮಂತರ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ದ್ವೇಷದ ಭಾಷಣ ನೀಡಿದ ಪ್ರಕರಣದಲ್ಲಿ ಪ್ರೀತ್ ಸಿಂಗ್ ಸದ್ಯ ಜಾಮೀನಿನ ಮೇಲಿದ್ದಾನೆ. ತನ್ನ ಅತ್ತೆ ಮನೆಯಿಂದ  ತಪ್ಪಿಸಿಕೊಂಡು ಬಂದು ಹೆತ್ತವರ ಮನೆ ಸೇರಿದ ತಕ್ಷಣ ನಿತ್ಯಾ ಇತ್ತೀಚೆಗೆ ಬೇಗಂಪುರ್ ಠಾಣೆಯಲ್ಲಿ ಪತಿ, ಮೈದುನ, ಮಾವ ಹಾಗೂ ಅತ್ತೆ ವಿರುದ್ಧ ದೂರು ದಾಖಲಿಸಿದ್ದು ಪತಿ, ಮಾವ ಮತ್ತು ಮೈದುನನ ವಿರುದ್ದ ಅತ್ಯಾಚಾರ, ಅನೈಸರ್ಗಿಕ ಲೈಂಗಿಕ ಸಂಪರ್ಕ ಮುಂತಾದ ಆರೋಪ ಹೊರಿಸಲಾಗಿದೆ.

ಸದ್ಯ ಸಿಂಗ್ ಮತ್ತಾತನ ತಂದೆ ಸುಂದರ್ ಪಾಲ್ ತಲೆಮರೆಸಿಕೊಂಡಿದ್ದು ಪೊಲೀಸರು ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಲಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ನಿತ್ಯಾಳನ್ನು ಪ್ರೀತ್ ಸಿಂಗ್ 2009ರಲ್ಲಿ ವಿವಾಹವಾಗಿದ್ದ. ಆಕೆ 2013ರಲ್ಲಿ ಎಂಟು ತಿಂಗಳು ಗರ್ಭಿಣಿಯಾಗಿದ್ದಾಗ ದಂಪತಿ ಪ್ರತ್ಯೇಕಗೊಂಡಿದ್ದರು. ಆದರೆ ನಿತ್ಯಾ ತನ್ನ ಅತ್ತೆ ಮಾವನ ಜತೆಗೆ ವಾಸಿಸುತ್ತಿದ್ದರು. ಪ್ರೀತ್ ಕಳೆದ ಡಿಸೆಂಬರ್‍ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ.

ಕಳೆದ ಮೂರು ವರ್ಷಗಳಿಂದ ತನ್ನ ಹೆತ್ತವರ ಮನೆಗೆ ಹೋಗಲು ಅಥವಾ ನೆರೆಹೊರೆಯವರ ಜೊತೆ ಮಾತನಾಡಲು ತನಗೆ ಅವಕಾಶ ನೀಡಿರಲಿಲ್ಲ. ಕಳೆದ ವರ್ಷದ ಕೋವಿಡ್ ಲಾಕ್ ಡೌನ್ ಆರಂಭಗೊಂಡಂದಿನಿಂದ ಪ್ರೀತ್ ಸಿಂಗ್ ಮತ್ತೆ ಮನೆಗೆ ಆಗಮಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ, ಸ್ನೇಹಿತನನ್ನು ಮನೆಗೆ ಕರೆದು ಆತನ ಜತೆಗೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸುವಂತೆ ಮಾಡುತ್ತಿದ್ದ. ಇದನ್ನು ಗಮನಿಸಿ ಮಾವ ಹಾಗೂ ಮೈದುನ ಕೂಡ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಪ್ರತಿ ಬಾರಿ ವಿರೋಧಿಸಿದಾಗ ಹಿಂಸಿಸಲಾಗುತಿತ್ತು. ಎಲ್ಲವೂ ತಿಳಿದಿದ್ದ ಅತ್ತೆಯೂ ಚೂರಿ ತೋರಿ ಬೆದರಿಸಿದ್ದಾರೆ ಎಂದು ನಿತ್ಯಾ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ದೂರು ನೀಡಿದಂದಿನಿಂದ ಅದನ್ನು ವಾಪಸ್ ಪಡೆಯುವಂತೆ ಸಿಂಗ್ ಸ್ನೇಹಿತರು ಒತ್ತಡ ಹಾಕಿ ಬೆದರಿಸುತ್ತಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News