ನಮ್ಮೆಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಮನವಿ

Update: 2022-06-02 07:11 GMT
PTI Photo

ಹೊಸದಿಲ್ಲಿ: ಸತ್ಯೇಂದ್ರ ಜೈನ್ ನಂತರ ಉಪ ಮುಖ್ಯಮಂತ್ರಿ  ಮನೀಶ್ ಸಿಸೋಡಿಯಾ ಬಂಧನಕ್ಕೊಳಗಾಗುವ ಮುಂದಿನ ದಿಲ್ಲಿ ಸಚಿವರಾಗುವ ಸಾಧ್ಯತೆಯಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ಹೇಳಿದ್ದಾರೆ.

“ನಮ್ಮೆಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ನಾನು ಮನವಿ ಮಾಡುತ್ತೇನೆ’’  ಎಂದು ವಿಡಿಯೋ ಸಂದೇಶದಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.

ಭ್ರಷ್ಟಾಚಾರ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ ಎಂದು "ವಿಶ್ವಾಸಾರ್ಹ ಮೂಲಗಳಿಂದ" ತಿಳಿದು ಬಂದಿದೆ ಎಂದು ಕೇಜ್ರಿವಾಲ್ ಹೇಳಿದರು.

"ಮನೀಷ್ ಸಿಸೋಡಿಯಾ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳು ನನಗೆ ತಿಳಿಸಿವೆ; ಅವರ ವಿರುದ್ಧ ನಕಲಿ ಪ್ರಕರಣಗಳನ್ನು ರಚಿಸುವಂತೆ ಕೇಂದ್ರವು ಎಲ್ಲಾ ಏಜೆನ್ಸಿಗಳಿಗೆ ಆದೇಶಿಸಿದೆ" ಎಂದು ಮುಖ್ಯಮಂತ್ರಿ ಹೇಳಿದರು.

"ನಮ್ಮನ್ನೆಲ್ಲ ಒಂದೇ ಬಾರಿಗೆ ಬಂಧಿಸಿ, ತನಿಖೆ ಮಾಡಿ ರೇಡ್ ಮಾಡಿ. ನಂತರ ನಾವು ಕೆಲಸಕ್ಕೆ ಮರಳಬಹುದು. ಏಕೆಂದರೆ ನಮಗೆ ರಾಜಕೀಯ ಅರ್ಥವಾಗುವುದಿಲ್ಲ. ನಾವು ಕೆಲಸ ಮಾಡಲು ಬಯಸುತ್ತೇವೆ’’ ಎಂದರು.

ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಗ್ಯ ಸಚಿವ  ಸತ್ಯೇಂದ್ರ ಜೈನ್‌ರನ್ನು ಬಂಧಿಸಲಾಗಿದೆ. ಜೈನ್ ರನ್ನು ಬಂಧಿಸಲಾಗುತ್ತದೆ ಎಂದು  ಕೇಜ್ರಿವಾಲ್ ಜನವರಿಯಲ್ಲಿ ಇದೇ ರೀತಿಯ "ಭವಿಷ್ಯ" ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News