ಗ್ರಾಹಕರ ಸೋಗಿನಲ್ಲಿ ಬಂದು ಹಣ ಕಳವು
Update: 2022-06-03 21:06 IST
ಕಾರ್ಕಳ, ಜೂ.೩: ಕಾರ್ಕಳ ಡಾ.ಟಿಎಂಎ ಪೈ ಆಸ್ಪತ್ರೆ ಎದುರಿನ ಮಂಜುಶ್ರೀ ಕಟ್ಟಡದಲ್ಲಿನ ಹಾರ್ಡ್‌ವೇರ್ ಅಂಗಡಿಗೆ ಜೂ.೨ರಂದು ಮಧ್ಯಾಹ್ನ ವೇಳೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರಿಬ್ಬರು, ಡ್ರಾವರ್ ಒಡೆದು ಲಕ್ಷಾಂತರ ರೂ. ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ಮಠದಬೆಟ್ಟುವಿನ ದೀಪಕ್ ಭಟ್ ಎಂಬವರ ಧ್ವನಿ ಎಂಟರ್ ಪ್ರೈಸಸ್ ಹಾರ್ಡ್‌ವೇರ್ ಅಂಗಡಿಗೆ ಇಬ್ಬರು ವ್ಯಕ್ತಿಗಳು ಬಂದು ೪ ಚೀಲ ಸಿಮೆಂಟ್ ಅಂಗಡಿಯ ಪಕ್ಕದಲ್ಲಿರುವ ಮನೆಗೆ ಹಾಕುವಂತೆ ತಿಳಿಸಿದರು. ಆಗ ಅಂಗಡಿ ಯಲ್ಲಿದ್ದ ಕೆಲಸಗಾರ ಅಶೋಕ್ ಸಿಮೆಂಟ್ ಚೀಲವನ್ನು ಆ ಮನೆಗೆ ತೆಗೆದು ಕೊಂಡು ಹೋಗಿ ಬಂದು ನೋಡಿದಾಗ ಇಬ್ಬರು ವ್ಯಕ್ತಿಗಳು ಇರಲಿಲ್ಲ.
ಬಳಿಕ ಪರಿಶೀಲಿಸಿದಾಗ ಅವರು ಮೇಜಿನ ಡ್ರಾವರನ್ನು ಒಡೆದು ೧,೪೫,೦೦೦ ರೂ.ವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ ಎಂದು ದೂರಲಾಗಿದೆ. ಈ ಬಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.