'ಶಾಟ್' ಬಾಡಿ ಸ್ಪ್ರೇ ಜಾಹೀರಾತಿಗೆ ವಾರ್ತಾ ಪ್ರಸಾರ ಸಚಿವಾಲಯದಿಂದ ನಿರ್ಬಂಧ
Update: 2022-06-04 17:31 IST
ಹೊಸದಿಲ್ಲಿ: ಲೇಯರ್ರ್ ಬ್ರ್ಯಾಂಡ್‍ನ 'ಶಾಟ್' ಬಾಡಿ ಸ್ಪ್ರೇ ಜಾಹೀರಾತುಗಳನ್ನು ನಿರ್ಬಂಧಿಸಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆಯಲ್ಲದೆ ಈ ಜಾಹೀರಾತುಗಳ ವೀಡಿಯೋಗಳನ್ನು ತೆಗೆದು ಹಾಕುವಂತೆ ಟ್ವಿಟರ್ ಮತ್ತು ಯುಟ್ಯೂಬ್‍ಗೂ ಸೂಚಿಸಿದೆ.
ತನ್ನ ಜಾಹೀರಾತುಗಳಲ್ಲಿ 'ರೇಪ್ ಸಂಸ್ಕೃತಿ'ಯನ್ನು ಉತ್ತೇಜಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಿಗರಿಂದ ಈ ಕಂಪೆನಿ ತೀವ್ರ ಟೀಕೆಗೆ ಗುರಿಯಾದ ನಂತರ ಸಚಿವಾಲಯದ ಕ್ರಮ ಬಂದಿದೆ.
ಈ ಜಾಹೀರಾತು ಭಾರತದ ಜಾಹೀರಾತು ಮಾನದಂಡಗಳ ಮಂಡಳಿ (ಎಸ್‍ಎಸ್‍ಸಿಐ) ನಿಯಮಗಳನ್ನೂ ಉಲ್ಲಂಘಿಸಿದೆ ಎಂದು ಮಂಡಳಿ ಹೇಳಿದೆಯಲ್ಲದೆ ತನಿಖೆ ಪೂರ್ಣಗೊಳ್ಳುವ ತನಕ ಜಾಹೀರಾತು ಪ್ರಸಾರ ನಿಲ್ಲಿಸುವಂತೆ ಸೂಚಿಸಿರುವುದಾಗಿಯೂ ತಿಳಿಸಿದೆ.