×
Ad

ಹಿಂಸಾಮಾರ್ಗ ಹಿಡಿಯದಿರಿ: ಸೇನಾಕಾಂಕ್ಷಿಗಳಿಗೆ ವರುಣ್ ಗಾಂಧಿ ಮನವಿ

Update: 2022-06-17 22:58 IST

ಹೊಸದಿಲಿ,ಜೂ.17: ನೂತನ ‘ಅಗ್ನಿಪಥ್’ ಸೇನಾ ನೇಮಕಾತಿ ಯೋಜನೆಯನ್ನು ಈಗಾಗಲೇ ಬಲವಾಗಿ ವಿರೋಧಿಸಿರುವ ಬಿಜೆಪಿ ಸಂಸದ ವರುಣ್ಗಾಂಧಿ ಅವರು ಶುಕ್ರವಾರ ಪ್ರಸಾರ ಮಾಡಿದ ವಿಡಿಯೋ ಸಂದೇಶವೊಂದರಲ್ಲಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಿಂಸಾಮಾರ್ಗವನ್ನು ಹಿಡಿಯದಂತೆ ಸೇನಾಕಾಂಕ್ಷಿಗಳಿಗೆ ಮನವಿ ಮಾಡಿದ್ದಾರೆ.‘‘ ಓರ್ವ ಯೋಧನು ಮೊದಲಿಗೆ ದೇಶದ ಹಿತಾಸಕ್ತಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾನೆ. ಹೀಗಾಗಿ ದೇಶದ ಆಸ್ತಿಗಳಿಗೆ ಹಾನಿ ಮಾಡುತ್ತಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವುದು ನೈತಿಕವಾದುದಲ್ಲ’’ಎಂದವರು ಹೇಳಿದ್ದಾರೆ. ಯುವಜನರ ಕಳವಳಗಳನ್ನು ನಿವಾರಿಸಲುತಾನು ಶಕ್ತಿ ಮೀರಿ ಪ್ರಯತ್ನಿಸುವುದಗಿ ಹೇಳಿದ್ದಾರೆ.

 ‘‘ ನಾನು ಇಂದು ಮಾಡಿರುವ ಮನವಿಯನ್ನು, ನಿಮ್ಮ ಓರ್ವ ಹಿರಿಯ ಸಹೋದರನಿಂದ ಬಂದಿಯೆಂದೇ ಪರಿಗಣಿಸಿ. ಜಟಿಲವಾದ ಸಮಸ್ಯೆಗಳಿಗೆ ಪರಿಹಾರವು ಮಾತುಕತೆಗಳಲ್ಲಿ ಅಡಗಿದೆ. ನೀವು ದೇಶದ ಭವಿಷ್ಯವಾಗಿದ್ದೀರಿ. ಹಾಗೂ ಹೀಗಾಗಿ ನಿಮ್ಮಿಂದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ನಿಮ್ಮ ಬೇಡಿಕೆಗಳು ಅಲಿಸಲ್ಪಡುವಂತೆ ಮಾಡಲು ನಾನು ಸಾಧ್ಯವಿರುವುದೆಲ್ಲವನ್ನೂ ಮಾಡಲಿದ್ದೇನೆ’’ ಎಂದು ವರುಣ್ ಗಾಂಧಿ ಹೇಳಿದ್ದಾರೆ.

ಪ್ರತಿಭಟನಕಾರರ ಬೇಡಿಕೆಗಳಿಗೆ ತನ್ನ ಬೆಂಬಲವನ್ನು ಘೋಷಿಸಿದ ಅವರು ‘‘ನಿಮ್ಮ ಬೇಡಿಕೆಗಳು ಸಮರ್ಥನೀಯವಾಗಿದ್ದರೂ ಆ ಬೇಡಿಕೆಗಳನ್ನು ಆಗ್ರಹಿಸುವಾಗ ಪ್ರಜಾತಾಂತ್ರಿಕ ಘನತೆಯನ್ನು ಕಾಪಾಡಿಕೊಳ್ಳಬೇಕಾಗಿದೆ’’ ಎಂದವರು ಕರೆ ನೀಡಿದರು.
 ಅಗ್ನಿಪಥ್ ಯೋಜನೆಯಡಿ ನೇಮಕಗೊಳ್ಳುವ ಯೋಧರ ನೇಮಕಾತಿಯ ವಯಸ್ಸನ್ನು 23ಕ್ಕೆ ಏರಿಸಿರುವ ಬಗ್ಗೆ ಪ್ರಸ್ತಾವಿಸಿದ ಅವರು ನಮ್ಮ ಬೇಡಿಕೆಗಳನ್ನು ಸರಕಾರವು ಆಲಿಸುವುದೆಂಬ ಭರವಸೆಯು ಇದರಿಂದ ಮೂಡಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News