×
Ad

ವಾಯು ಪಡೆಯಿಂದ ‘ಅಗ್ನಿಪಥ್’ ಯೋಜನೆ ಅಡಿಯಲ್ಲಿ ಜೂ. 24ರಿಂದ ನೇಮಕಾತಿ ಆರಂಭ

Update: 2022-06-17 23:57 IST

ಹೊಸದಿಲ್ಲಿ, ಜೂ. 17: ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕಾತಿಗೆ  ವಯೋಮಿತಿಯನ್ನು  21ರಿಂದ 23ಕ್ಕೆ ಏರಿಕೆ ಮಾಡಿದ ಕೇಂದ್ರ ಸರಕಾರವನ್ನು ಭಾರತೀಯ ನೌಕಾ ಪಡೆ ಶುಕ್ರವಾರ ಪ್ರಶಂಸಿದೆ. 

ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಭಾರತೀಯ ವಾಯು ಪಡೆಯ ವರಿಷ್ಠ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ‘‘ವಯೋಮಿತಿಯನ್ನು (ನೇಮಕಾತಿಗೆ) 23 ವರ್ಷ ಏರಿಕೆ ಮಾಡಿ ಪರಿಷ್ಕರಿಸಿರುವುದನ್ನು ಘೋಷಿಸಲು ಸಂತೋಷವಾಗುತ್ತಿದೆ. ಇದು ಯುವಕರಿಗೆ ಪ್ರಯೋಜನವಾಗಲಿದೆ. ಭಾರತೀಯ ವಾಯು ಪಡೆಯ ನೇಮಕಾತಿ ಪ್ರಕ್ರಿಯೆ ಜೂನ್ 24ರಿಂದ ಆರಂಭವಾಗಲಿದೆ’’ ಎಂದಿದ್ದಾರೆ. 

ಯುವಕರಿಗೆ ಶಸಸ್ತ್ರ ಪಡೆ ಸೇರಲು ಕೇಂದ್ರ ಸರಕಾರ ಅಗ್ನಿಪಥ ಯೋಜನೆ ಘೋಷಿಸಿತ್ತು. ವಯೋಮಿತಿ  17.5ರಿಂದ 21 ವರ್ಷ ಇತ್ತು. ಮೊದಲ ನೇಮಕಾತಿಯ ಸಂದರ್ಭದಲ್ಲೇ ವಯೋಮಿತಿಯನ್ನು 23 ವರ್ಷಕ್ಕೆ ಪರಿಷ್ಕರಿಸಿರುವುದನ್ನು ಪ್ರಕಟಿಸಲು ಸಂತೋಷವಾಗುತ್ತದೆ. ಇದು ಯುವಕರಿಗೆ  ಪ್ರಯೋಜನವಾಗಲಿದೆ. ವಾಯು ಪಡೆಯ ನೇಮಕಾತಿ ಜೂನ್ 24ರಂದು ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. 
ಕೋವಿಡ್ ಸಾಂಕ್ರಾಮಿಕ ರೋಗ ಕಳೆದ ಎರಡು ವರ್ಷಗಳ ಕಾಲ ಸೇನಾ ನೇಮಕಾತಿಯನ್ನು  ಸ್ಥಗಿತಗೊಳಿಸಿತ್ತು. 2019-2020ರಲ್ಲಿ ಸೇನೆ ಯೋಧರ ನೇಮಕಾತಿ ನಡೆಸಿತ್ತು. ಅನಂತರ ಯಾವುದೇ ನೇಮಕಾತಿ ಮಾಡಿರಲಿಲ್ಲ. ಇನ್ನೊಂದೆಡೆ ಭಾರತೀಯ ವಾಯು ಪಡೆ ಹಾಗೂ ಭಾರತೀಯ ನೌಕಾ ಪಡೆ ಎರಡು ವರ್ಷಗಳಲ್ಲಿ ಕ್ರಮವಾಗಿ ನೇಮಕಾತಿ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News