ಸಿಕಂದರಾಬಾದ್‌ನ ಪ್ರತಿಭಟನೆಗೆ ರಕ್ಷಣಾ ತರಬೇತಿ ಅಕಾಡೆಮಿ ನಡೆಸುತ್ತಿರುವ ಮಾಜಿ ಯೋಧನ ಪ್ರಚೋದನೆ ಕಾರಣ: ಪೊಲೀಸ್

Update: 2022-06-18 17:50 GMT
ಫೈಲ್ ಫೋಟೊ

ಹೈದರಾಬಾದ್, ಜೂ. 18: ಹೈದರಾಬಾದ್‌ನ ರೈಲ್ವೆ ನಿಲ್ದಾಣದ ಮೇಲೆ ಯುವಕರು ದಾಳಿ ನಡೆಸಲು ಸೇನಾ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿರುವ ಎಎಸ್‌ಆರ್‌ನ ಸಾಯಿ ಶಿಕ್ಷಣ ಸಂಸ್ಥೆಗಳು, ರಕ್ಷಣಾ ಅಕಾಡೆಮಿಯ ನಿರ್ದೇಶಕ ಹಾಗೂ ಮಾಜಿ ಯೋಧ ಅವುಲಾ ಸುಬ್ಬ ರಾವ್‌ಪ್ರಚೋದನೆ ಕಾರಣ  ಎಂದು ಪೊಲೀಸರು ತಿಳಿಸಿದ್ದಾರೆ. 

ಆಂಧ್ರಪ್ರದೇಶದ ಪಾಲ್ನಡು ಜಿಲ್ಲೆಯ ನರಸರಪೇಟದವರದಾ ರಾವ್ ಅವರು ತನ್ನ ಹುಟ್ಟೂರಿನಲ್ಲಿ ಈ ಅಕಾಡೆಮಿ ಆರಂಭಿಸಿದ್ದರು. ಅನಂತರ ತೆಲಂಗಾಣದ ಇತರ ಭಾಗಗಳಲ್ಲಿ 9 ಶಾಖೆಗಳನ್ನು ಆರಂಭಿಸಿದ್ದರು. ಮಾಜಿ ರಕ್ಷಣಾ ಸಿಬ್ಬಂದಿ ನೇತೃತ್ವದಲ್ಲಿ ಕಠಿಣ ದೈಹಿಕ ಸದೃಢ ತರಬೇತಿಯೊಂದಿಗೆ ಅಕಾಡೆಮಿಯ ತರಬೇತು ಮಾದರಿಯನ್ನು ಅವರು ಉತ್ತಮವಾಗಿ ವಿನ್ಯಾಸಗೊಳಿಸಿದ್ದರು ಎಂದು ಮೂಲಗಳು ತಿಳಿಸಿವೆ. 

ಬಿಎಸ್‌ಸಿ ಹಾಗೂ ಬಿಎಡ್ ಪದವೀಧರರಾದ ರಾವ್ ಅವರು 2020ರಲ್ಲಿ ಎಎಸ್‌ಆರ್‌ನ ಶಿಕ್ಷಣ ಸಂಸ್ಥೆಗಳು ಹಾಗೂ ರಕ್ಷಣಾ ಅಕಾಡೆಮಿಯನ್ನು ಆರಂಭಿಸುವ ಮೊದಲ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆಂಧ್ರಪ್ರದೇಶ ಹಾಗೂ ತೆಲಂಗಾಣದ  ವಿದ್ಯಾರ್ಥಿಗಳು ಅಲ್ಲದೆ, ಒಡಿಶಾ, ತಮಿಳುನಾಡು ಹಾಗೂ ಕರ್ನಾಟಕದ ವಿದ್ಯಾರ್ಥಿಗಳು ಕೂಡ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರ ಅಕಾಡೆಮಿಯಿಂದ ಸೇನಾಪಡೆ, ನೌಕಾಪಡೆ, ವಾಯು ಪಡೆ, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಟಿ ಹಾಗೂ ಬಿಎಸ್‌ಎಫ್‌ಗೆ ಕನಿಷ್ಠ 500ರಿಂದ 1000 ಆಕಾಂಕ್ಷಿಗಳು ಸೇರಿದ್ದಾರೆ. 

‘‘ಪ್ರತಿಭಟನೆ ನಡೆಸುವಂತೆ ರಾವ್ ಅವರು ತನ್ನ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಯುವಕರು ಪೆಟ್ರೋಲ್, ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದವರಲ್ಲಿ ಅವರು ಕೂಡ ಒಬ್ಬರು. ಸಿಕಂದರಾಬಾದ್‌ಗೆ ತೆರಳಲು ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವರು  ತೆಲಂಗಾಣದಲ್ಲಿ ಯುವಕರನ್ನು ಸಂಘಟಿಸಿದ್ದಾರೆ’’ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ರೈಲ್ವೆ , ತೆಲಂಗಾಣ) ಸಂದೀಪ್ ಶಾಂಡಿಲ್ಯಾ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News