ಗುವಾಹಟಿಯಿಂದ ಗೋವಾಕ್ಕೆ ತೆರಳುವ ಯೋಜನೆ ಕೊನೆಯ ಕ್ಷಣದಲ್ಲಿ ಬದಲಿಸಿದ ಶಿವಸೇನೆಯ ಬಂಡಾಯ ಶಾಸಕರು

Update: 2022-06-29 09:14 GMT
Photo: PTI

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲರು ಆದೇಶ ನೀಡಿದ್ದರಿಂದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಂಡುಕೋರರ ಗುಂಪು  ಇಂದು ಗುವಾಹಟಿಯಿಂದ ಗೋವಾಕ್ಕೆ ತೆರಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ,  ಕೊನೆಯಕ್ಷಣದಲ್ಲಿ ಯೋಜನೆ ಬದಲಾದ ಕಾರಣ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶಿಂಧೆ ಬಣ  ತಮ್ಮ ಹೋಟೆಲ್‌ಗೆ ಮರಳಿದೆ.

 ಇಂದು ಸಂಜೆ ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ ಬಂಡಾಯ ಪಾಳಯವು ತನ್ನ  ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಮೂಲಗಳು ಹೇಳುತ್ತವೆ.

ಗುವಾಹಟಿಯಿಂದ ಗೋವಾಕ್ಕೆ ತೆರಳಲು ಚಾರ್ಟರ್ಡ್ ವಿಮಾನವನ್ನು ಸಿದ್ಧಪಡಿಸಲಾಗಿದೆ.

ಇಂದು ಬೆಳಿಗ್ಗೆ  ಬಸ್‌ಗಳು ಬಂಡುಕೋರ ಶಾಸಕರು ಒಂದು ವಾರದಿಂದ ತಂಗಿದ್ದ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ಗೆ ಪ್ರವೇಶಿಸಿದ್ದವು.

ಬಂಡಾಯ ಶಾಸಕರನ್ನು ದೇವಾಲಯಕ್ಕೆ ಕರೆದೊಯ್ಯುವಾಗ  ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಂಡುಕೋರ ಶಾಸಕರು ಇಂದು ಸಂಜೆ ಚಾರ್ಟರ್ಡ್ ಸ್ಪೈಸ್ ಜೆಟ್ ವಿಮಾನದಲ್ಲಿ ಕರಾವಳಿ ರಾಜ್ಯ ಗೋವಾಕ್ಕೆ ಹಾರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 ಅಸ್ಸಾಂ ಸಂಸದೀಯ ವ್ಯವಹಾರಗಳ ಸಚಿವ ಪಿಜುಶ್ ಹಝಾರಿಕಾ ಹಾಗೂ  ರಾಜ್ಯ ಬಿಜೆಪಿಯ ಇತರ ನಾಯಕರು ಮಹಾರಾಷ್ಟ್ರ ಶಾಸಕರೊಂದಿಗೆ ಕಾಮಾಖ್ಯ ದೇವಸ್ಥಾನಕ್ಕೆ ತೆರಳಿದ್ದರು.

ಗೋವಾದಲ್ಲಿ, ಬಂಡಾಯ ಶಾಸಕರು ತಾಜ್ ರೆಸಾರ್ಟ್ ಹಾಗೂ  ಕನ್ವೆನ್ಷನ್ ಸೆಂಟರ್‌ನಲ್ಲಿ ಉಳಿಯಬಹುದು, ಅಲ್ಲಿ 70 ಕೊಠಡಿಗಳನ್ನು ಬುಕ್ ಮಾಡಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News