ಬಹುಮತ ಸಾಬೀತು ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಉದ್ಧವ್ ಠಾಕ್ರೆ ಅರ್ಜಿ ಇಂದು ಸಂಜೆ ವಿಚಾರಣೆ

Update: 2022-06-29 09:50 GMT
Photo:PTI

ಹೊಸದಿಲ್ಲಿ: 16 ಬಂಡಾಯ ಶಾಸಕರು ತಮ್ಮ  ಸಂಭವನೀಯ ಅನರ್ಹತೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸದ ಕಾರಣ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಬಹುಮತ ಸಾಬೀತುಪಡಿಸಬೇಕೆಂಬ ಆದೇಶ ಕಾನೂನುಬಾಹಿರವಾಗಿದೆ ಎಂದಿರುವ  ಉದ್ಧವ್ ಠಾಕ್ರೆ ತಂಡವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.

ರಾಜ್ಯಪಾಲರನ್ನು ಭೇಟಿಯಾಗಿರುವ ಬಿಜೆಪಿ ನಾಯಕರು  ಉದ್ಧವ್ ಠಾಕ್ರೆ ನೇತೃತ್ವದ ಸರಕಾರವು ತನ್ನ ಬಹುಮತವನ್ನು ಕಳೆದುಕೊಂಡಿದೆ ಎಂದು ಹೇಳಿದ ಮರುದಿನವೇ  ರಾಜ್ಯಪಾಲರು ಶಕ್ತಿ ಪರೀಕ್ಷೆಗೆ ಆದೇಶಿಸಿದರು.

ಸಂಭಾವ್ಯ ಅನರ್ಹತೆಯ ಕುರಿತು ವಿಚಾರಣೆ ಬಾಕಿ ಉಳಿದಿರುವುದಕ್ಕೂ, ಬಹುಮತ ಸಾಬೀತುಪಡಿಸುವುದಕ್ಕೂ  ಯಾವುದೇ ಸಂಬಂಧವಿಲ್ಲ ಎಂದು ಬಂಡಾಯ ಶಾಸಕರ ಪರ ವಕೀಲ ಎನ್.ಕೆ. ಕೌಲ್  ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ನಂತರ ಸುಪ್ರೀಂ ಕೋರ್ಟ್ ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News