ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2022-06-29 21:00 IST
ಉಡುಪಿ : ಗಾಂಜಾ ಸೇವನೆಗೆ ಸಂಬಂಧಿಸಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಜೂ.25ರಂದು 76ನೆ ಬಡಗಬೆಟ್ಟು ಗ್ರಾಮದ ನಂದಗೋಕುಲ ಯುವಕ ಮಂಡಲ ಬಳಿ ಕಟಪಾಡಿ ಸುಭಾಷ್ ನಗರದ ಫಯಾಝ್ (29) ಹಾಗೂ ೭೬ನೆ ಬಡಗುಬೆಟ್ಟು ಗ್ರಾಮದ ಹನುಮಾನ್ ಗ್ಯಾರೇಜ್ ಬಳಿ ಕೊರಂಗ್ರಪಾಡಿಯ ವೆಲಿಂಗ್ಟನ್ ರಿಚರ್ಡ್(39) ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.