×
Ad

ಲಕ್ನೋ: ಲುಲು ಮಾಲ್‌ನಲ್ಲಿ ನಮಾಝ್‌ಗೆ ಅವಕಾಶ ಬೇಡ ಎಂದ ಹಿಂದುತ್ವ ಸಂಘಟನೆ

Update: 2022-07-14 18:31 IST

ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉದ್ಘಾಟಿಸಿದ ಕೆಲವೇ ದಿನಗಳ ಬಳಿಕ, ಬಲಪಂಥೀಯ ಹಿಂದುತ್ವ ಸಂಘಟನೆಯು ಮಾಲ್ ಆವರಣದಲ್ಲಿ ನಮಾಝ್‌  ಅನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು, ಲಕ್ನೋದ ಲುಲು ಮಾಲ್ ವಿವಾದಕ್ಕೆ ಸಿಲುಕಿದೆ.

ಮಾಲ್‌ನಲ್ಲಿ ನಮಾಝ್‌  ಮಾಡಲು ಅವಕಾಶ ಇದೆ ಎಂದು ಹೇಳಲಾದ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ನಂತರ ಮಾಲ್‌ನಲ್ಲಿ ನಮಾಝ್‌  ಅನ್ನು ನಿಷೇಧಿಸುವಂತೆ ಅಖಿಲ ಭಾರತೀಯ ಹಿಂದೂ ಮಹಾಸಭಾವು ಒತ್ತಾಯಿಸಿದೆ ಎಂದು ವರದಿಯಾಗಿದೆ.

ಲುಲು ಮಾಲ್‌ಗಳು ಈ ಹಿಂದೆಯೂ ಇಂತಹದ್ದೇ ಕಾರಣಗಳಿಗಾಗಿ ಸುದ್ದಿಯಲ್ಲಿತ್ತು, ಇದೀಗ ಉತ್ತರಪ್ರದೇಶದಲ್ಲಿಯೂ ಅದನ್ನೇ ಮುಂದುವರಿಸಲಾಗುತ್ತಿದೆ ಎಂದು ಹಿಂದೂ ಮಹಾಸಭಾದ ನಾಯಕ ಶಿಶಿರ್ ಚತುರ್ವೇದಿ  ಲುಲು ಮಾಲ್‌ ಅನ್ನು ಉದ್ದೇಶಿಸಿ ಹೇಳಿದ್ದಾರೆ.

"ಲುಲು ಮಾಲ್ ಈಗ ತನ್ನ ನಿಜವಾದ ಬಣ್ಣವನ್ನು ತೋರಿಸುತ್ತಿದೆ. ಈ ಮಾಲ್ ಈಗಾಗಲೇ ಇದೇ ರೀತಿಯ ಕೃತ್ಯಗಳಿಗಾಗಿ ಸುದ್ದಿಯಲ್ಲಿದೆ. ಈಗ ಯುಪಿಯಲ್ಲೂ ಅದೇ ರೀತಿ ಮಾಡುತ್ತಿದೆ" ಅವರು ಹೇಳಿದದ್ದಾರೆ. ನಮಾಝ್‌  ಗೆ ಅವಕಾಶ ನೀಡುವ ಪ್ರತಿಯೊಂದು ಮಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾಸಭಾ ಒತ್ತಾಯಿಸಿದೆ.

ಸಂಘಟನೆಯು ಮಾಲ್ ಅನ್ನು ಬಹಿಷ್ಕರಿಸಲು ಕರೆ ನೀಡಿದ್ದು, ಮಾಲ್ ಆವರಣದಲ್ಲಿ ನಮಾಝ್‌  ನೀಡಿದರೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಹೇಳಿದೆ.

ಮತ್ತೊಂದೆಡೆ ಮಾಲ್ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದು, ವೈರಲ್‌ ಆದ ವೀಡಿಯೊದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದೆ. "ನಾವು ಇದನ್ನು ಮಾಲ್ ಒಳಗೆ ಅನುಮತಿಸುವುದಿಲ್ಲ." ಎಂದು ಮಾಲ್ ಸ್ಪಷ್ಟೀಕರಣದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News