×
Ad

75 ವರ್ಷಗಳ ಬಳಿಕ ಪೂರ್ವಜರ ಮನೆಗೆ ಭೇಟಿ ನೀಡಲು ಪಾಕಿಸ್ತಾನಕ್ಕೆ ತೆರಳಿದ 92 ವರ್ಷದ ಭಾರತದ ಮಹಿಳೆ

Update: 2022-07-17 12:07 IST

ಇಸ್ಲಾಮಾಬಾದ್: 92 ವರ್ಷದ ಭಾರತೀಯ ಮಹಿಳೆ ರೀನಾ ಚಿಬರ್ ಅವರು 75 ವರ್ಷಗಳ ಬಳಿಕ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲು ಶನಿವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಸೌಹಾರ್ದ ಸೂಚಕದ ಭಾಗವಾಗಿ ಪಾಕಿಸ್ತಾನಿ ಹೈಕಮಿಷನ್ ಹಿರಿಯ ಮಹಿಳೆಗೆ ಮೂರು ತಿಂಗಳ ವೀಸಾವನ್ನು ನೀಡಿದೆ ಎಂದು The Express Tribune ವರದಿ ಮಾಡಿದೆ.

ಪಾಕಿಸ್ತಾನದ ರಾವಲ್ಪಿಂಡಿಯ ಪ್ರೇಮ್ ನಿವಾಸ್‌ನಲ್ಲಿರುವ ತನ್ನ ಪೂರ್ವಜರ ಮನೆಯನ್ನು ನೋಡಲು ಮಹಿಳೆ ಶನಿವಾರ ವಾಘಾ-ಅಟ್ಟಾರಿ ಗಡಿಯ ಮೂಲಕ ತೆರಳಿದರು.

 "ನಮಗೆ ಬರಲು ಹಾಗೂ ಹೋಗುವುದನ್ನು   ಸುಲಭಗೊಳಿಸಲು" ವೀಸಾ ನಿರ್ಬಂಧಗಳನ್ನು ಸರಾಗಗೊಳಿಸಲು "ಒಟ್ಟಿಗೆ ಕೆಲಸ ಮಾಡುವಂತೆ  ಹಿರಿಯ ಮಹಿಳೆ ಎರಡೂ ದೇಶಗಳ ಸರಕಾರಗಳನ್ನು ಒತ್ತಾಯಿಸಿದರು.

"ನನ್ನ ಒಡಹುಟ್ಟಿದವರಿಗೆ ಸ್ನೇಹಿತರಿದ್ದರು. ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯದವರೊಂದಿಗೆ  ಅವರು ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆ ವೈವಿಧ್ಯಮಯ ಜನರ ಮಿಶ್ರಣವಾಗಿತ್ತು" ಎಂದು ರೀನಾ  ನೆನಪಿಸಿಕೊಂಡರು.

1947 ರಲ್ಲಿ, ವಿಭಜನೆಯ ನಂತರ, ರೀನಾ ಅವರ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಂಡಿತು. ಮಾಧ್ಯಮ ವರದಿಯ ಪ್ರಕಾರ ಆ ಸಮಯದಲ್ಲಿ ರೀನಾ ಅವರಿಗೆ 15 ವರ್ಷ.

"ತನ್ನ ಪೂರ್ವಜರ ಮನೆ, ತನ್ನ  ನೆರೆಹೊರೆ ಹಾಗೂ  ಬೀದಿಗಳನ್ನು ತನ್ನ ಹೃದಯದಿಂದ ತೆಗೆದುಹಾಕಲು ಸಾಧ್ಯವಾಗಲಿಲ್ಲ" ಎಂದು ರೀನಾ ಹೇಳಿದರು.

ರೀನಾ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲು 1965 ರಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು.  ಆದರೆ ಎರಡು ನೆರೆಹೊರೆ ದೇಶಗಳ ನಡುವಿನ ಯುದ್ಧದ ಕಾರಣ ಹೆಚ್ಚಿನ ಉದ್ವಿಗ್ನತೆಯ ನಡುವೆ ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ ಎಂದು  The Express Tribune ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News