ಉದ್ಧವ್ ಠಾಕ್ರೆ ನೇಮಿಸಿದ್ದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ವಿಸರ್ಜಸಿ ಚು. ಆಯೋಗಕ್ಕೆ ಪತ್ರ ಬರೆದ ಏಕನಾಥ್ ಶಿಂಧೆ

Update: 2022-07-20 07:54 GMT
Photo:PTI

ಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಇದೀಗ ಶಿವಸೇನೆ ಪಕ್ಷದ ಮೇಲೆ ಹಕ್ಕು ಸಾಧಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಉದ್ಧವ್ ಠಾಕ್ರೆ ಅವರು ನೇಮಿಸಿದ್ದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ವಿಸರ್ಜಿಸಲಾಗಿದ್ದು, ಹೊಸ ಕಾರ್ಯಕಾರಿಣಿಯನ್ನು ರಚಿಸಿರುವುದಾಗಿ ಏಕನಾಥ್ ಶಿಂಧೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಹೊಸ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಬಹುಪಾಲು ಶಿವಸೇನೆ ನಾಯಕರು ರಚಿಸಿದ್ದಾರೆ ಎಂದು ಶಿಂಧೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಬಾಳ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆಯ ನಾಯಕನ ಸ್ಥಾನದಿಂದ ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಗೊಳಿಸಲು ಇದು ಮೊದಲ ಔಪಚಾರಿಕ ಕ್ರಮವಾಗಿದೆ.

ಶಿವಸೇನೆಯ ಉಸ್ತುವಾರಿ ಯಾರು ಎಂಬುದನ್ನು ಪರಿಣಾಮಕಾರಿಯಾಗಿ ನಿರ್ಧರಿಸುವ ಆರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುವ ದಿನದಂದು ಶಿಂಧೆ ಈ ಮಹತ್ವದ ಕ್ರಮವು  ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News