ನೆಹರೂ, ವಾಜಪೇಯಿ ಮೂರ್ಖತನದಿಂದಾಗಿ ಟಿಬೆಟ್,ತೈವಾನ್ ಚೀನಾದ ಭಾಗವೆಂದು ನಾವು ಒಪ್ಪಿಕೊಂಡಿದ್ದೇವೆ: ಸುಬ್ರಮಣಿಯನ್ ಸ್ವಾಮಿ

Update: 2022-08-03 12:15 GMT
 ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ: "ನೆಹರೂ ಮತ್ತು ವಾಜಪೇಯಿ ಅವರ ಮೂರ್ಖತನದಿಂದಾಗಿ ಟಿಬೆಟ್ ಮತ್ತು ತೈವಾನ್ ಎರಡೂ ಚೀನಾದ ಭಾಗವೆಂದು ನಾವು ಭಾರತೀಯರು ಒಪ್ಪಿಕೊಂಡಿದ್ದೇವೆ,'' ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಒಂದರಲ್ಲಿ ಹೇಳಿದ್ದಾರೆ.

"ಮೋದಿ ನಿದ್ದೆಯಲ್ಲಿ 'ಕೋಯೀ ಆಯಾ ನಹೀ' ಎಂದು ಹೇಳುತ್ತಿರುವಾಗಲೇ ಈಗ ಚೀನಾ ಪರಸ್ಪರ ಸಹಮತದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನೂ ಗೌರವಿಸುತ್ತಿಲ್ಲ ಹಾಗೂ ಲಡಾಖ್‍ನ ಭಾಗವನ್ನು ಕಬಳಿಸಿದೆ. ನಮ್ಮಲ್ಲಿ ನಿರ್ಧರಿಸಲು ಚುನಾವಣೆಗಳಿವೆ ಎಂಬುದನ್ನು ಚೀನಾ ತಿಳಿದಿರಬೇಕು,'' ಎಂದು ಸ್ವಾಮಿ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದಾರೆ.

ಚೀನಾದಿಂದ ಸತತ ಎಚ್ಚರಿಕೆಗಳ ಹೊರತಾಗಿಯೂ ಅಮೆರಿಕಾದ ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‍ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ವಾಮಿ ಅವರ ಹೇಳಿಕೆ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News