×
Ad

'ಹರ್‌ ಘರ್‌ ತಿರಂಗಾʼ ಪೋಸ್ಟರ್‌ ಗೆ ಅರಬ್ ಕುಟುಂಬದ ಫೋಟೊ: ಸಾಮಾಜಿಕ ತಾಣದಲ್ಲಿ ಟೀಕೆ

Update: 2022-08-07 13:19 IST

ಹೊಸದಿಲ್ಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ʼಹರ್‌ ಘರ್‌ ತಿರಂಗಾʼ ಘೋಷಣೆಯೊಂದಿಗೆ ಪ್ರತಿಯೊಂದು ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಮನವಿ ಮಾಡಿತ್ತು. ಈ ಕುರಿತು ಸರಕಾರ ಪ್ರಕಟಿಸಿದ ಪೋಸ್ಟರ್‌ ಒಂದರಲ್ಲಿ ಅರಬ್ ಮುಸ್ಲಿಂ ಕುಟುಂಬದ ಚಿತ್ರವನ್ನು ಅಳವಡಿಸಿರುವುದು ಸದ್ಯ ವ್ಯಾಪಕ ವ್ಯಂಗ್ಯ ಮತ್ತು ಆಕ್ರೋಶಕ್ಕೀಡಾಗಿದೆ. 

"ಬಿಜೆಪಿಗೆ ಭಾರತದಲ್ಲಿ ಸಂತೋಷವಾಗಿರುವ ಒಂದೇ ಒಂದು ಮುಸ್ಲಿಂ ಕುಟುಂಬದ ಫೋಟೊ ಕೂಡಾ ಸಿಕ್ಕಿಲ್ಲ ಅಂತ ಕಾಣುತ್ತೆ. ಅವರ ಅಲ್ಪಸಂಖ್ಯಾತ ಘಟಕದವರೂ ಇಲ್ಲ. ಹಾಗಾಗಿ ಅವರು ಮಲೇಶ್ಯನ್‌ ಕುಟುಂಬದ ಫೊಟೊವನ್ನು ಹಾಕಿದ್ದಾರೆ. ಭಾರತದ ಸ್ವಾತಂತ್ರ್ಯ ಅಭಿಯಾನಕ್ಕೆ ಮಲೇಶ್ಯಾದ ಕುಟುಂಬದ ಫೋಟೊ" ಎಂದು ನೆಟ್ಟಿಗರೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ಫೋಟೊವನ್ನು ಪರಿಶೀಲಿಸಿದಾಗ ಇದು freepik.com ಎಂಬ ವೆಬ್‌ಸೈಟ್‌ ನಿಂದ ಪಡೆದ ಫೋಟೊ ಆಗಿದೆ ಎಂದು ತಿಳಿದು ಬಂದಿದೆ. ಅರಬ್‌ ವ್ಯಕ್ತಿಯ, ಕುಟುಂಬದ ಫೋಟೊಗಾಗಿ ಸರ್ಚ್‌ ಮಾಡಿದಾಗ ಈ ಫೋಟೊ ಲಭಿಸುತ್ತದೆ. ಈ ಫೋಟೊಗೆ One big happy family a muslim family enjoying a day outside ಎಂಬ ಶೀರ್ಷಿಕೆಯನ್ನೂ ಅಳವಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News