ಬಿಹಾರ: ಮುರಿದು ಬಿದ್ದ ಎನ್‌ಡಿಎ ಮೈತ್ರಿ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ರಾಜೀನಾಮೆ

Update: 2022-08-09 15:57 GMT

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಜೆಡಿ(ಯು)-ಬಿಜೆಪಿ ಮೈತ್ರಿಕೂಟದ ಬಿಕ್ಕಟ್ಟಿನ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್  ತಮ್ಮ ಸ್ಥಾನಕ್ಕೆ ರಾಜಿನಾ

ಮುರಿದುಬಿದ್ದ ಜೆಡಿಯು-ಬಿಜೆಪಿ ಮೈತ್ರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಆರ್ಜೆಡಿ,ಕಾಂಗ್ರೆಸ್ ಸಹಿತ ಮಹಾಘಟಬಂಧನ್ನಿಂದ
ನಿತೀಶ್ಗೆ ಬೆಂಬಲ ಘೋಷಣೆ

ಇಂದು ನೂತನ ಸಂಪುಟ ಪ್ರಮಾಣ ಸಾಧ್ಯತೆ

  ಪಾಟ್ನಾ, ಆ.9: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ನಿತೀಶ್ ಕುಮಾರ್ ಅವರು ಮಂಗಳವಾರ ಬಿಜೆಪಿ ಜೊತೆ ಮೈತ್ರಿಕಡಿದುಕೊಂಡಿದ್ದು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಆರ್ಜೆಡಿ, ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳನ್ನೊಳಗೊಂಡ ಮಹಾಘಟಬಂಧನ ಮೈತ್ರಿಕೂಟದ ಬೆಂಬಲದೊಂದಿಗೆ ನೂತನ ಸರಕಾರ ರಚಿಸುವುದಾಗಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವುದು ಇದು ಎರಡನೆ ಸಲವಾಗಿದೆ. ರಾಜ್ಯಪಾಲ ಫಗುಚೌಹಾಣ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಿತೀಶ್ಕುಮಾರ್ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ತೊರೆಯಬೇಕೆಂದು ಜೆಡಿಯು ಪಕ್ಷದ ಎಲ್ಲಾ ಎಂಪಿಗಳು ಹಾಗೂ ಶಾಸಕರು ಸಹಮತ ಹೊಂದಿದ್ದಾರೆ ಎಂದು ಹೇಳಿದರು.
    ಇದೇ ವೇಳೆ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಅವರ ಪುತ್ರ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ನಡೆದ ಮಹಾಘಟಬಂಧನ್ (ಎಂಜಿಬಿ) ಶಾಸಕರ ಸಭೆಯಲ್ಲಿ ನಿತೀಶ್ ನೇತೃತ್ವದ ಸರಕಾರ ರಚನೆಗೆ ಬೆಂಬಲ ಘೋಷಿಸಲು ನಿರ್ಧರಿಸಲಾಯಿತು. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ಸಭೆಯಲ್ಲಿ ಪಾಲ್ಗೊಂಡ ಎಲ್ಲಾ ಮಹಾಮೈತ್ರಿಕೂಟದ ಎಲ್ಲಾ ಶಾಸಕರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವ ಪತ್ರಕ್ಕೆ ಸಹಿಹಾಕಿದ್ದಾರೆಂದು ಹೇಳಲಾಗಿದೆ.
  ಆರ್ಜೆಡಿ, ಎಡಪಕ್ಷಗಳು ಹಾಗೂ ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನ್ನ ಅಂಗಪಕ್ಷಳು ತನಗೆ ಬೆಂಬಲ ಘೋಷಿಸುತ್ತಿದ್ದಂತೆಯೇ ರಾಜ್ಯಪಾಲರನ್ನು ಮಂಗಳವಾರ ಎರಡನೆ ಬಾರ ಭೇಟಿಯಾದ ನಿತೀಶ್ ಕುಮಾರ್ ಅವರು ನೂತನ ಸರಕಾರ ರಚನೆಯ ಹಕ್ಕು ಮಂಡಿಸಿದರು. ಆರ್ಜೆಡಿ ನಾಯಕ ತೇಜಸ್ವಿಯಾದವ್ ಸೇರಿದಂತೆ ಎಂಜಿಬಿಯ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ನಿತೀಶ್ ಜೊತೆಗಿದ್ದರು.

ಬಿಜೆಪಿ ತುರ್ತು ಸಭೆ
  ನಿತೀಶ್ ರಾಜೀನಾಮೆಯ ಬೆನ್ನಲ್ಲೇ, ಬಿಜೆಪಿಯು ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿ ತುರ್ತು ಸಭೆ ನಡೆಸಿತು. ಪಕ್ಷಾಧ್ಯಕ್ಷ ಸಂಜಯ್ ಜೈಸ್ವಾಲ್ ಹಾಗೂ ನಿತೀಶ್ ಸಂಪುಟದಲ್ಲಿದ್ದ ಬಿಜೆಪಿಯ ಎಲ್ಲಾ ಸಚಿವರು ಹಾಗೂ ಇತ ಹಿರಿಯ ನಾಯಕರು ಸಬೆಯಲ್ಲಿ ಪಾಲ್ಗೊಡಿದ್ದರು.
    242 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚನೆಗೆ ಬೇಕಾದ ಬಹುಮತಕ್ಕೆ 121 ಶಾಸಕರ ಬೆಂಬಲದ ಅಗತ್ಯವಿದೆ. ಆರ್ಜೆಡಿ ಗರಿಷ್ಠ (79) ಶಾಸಕರನ್ನು ಹೊಂದಿದ್ದು, ಬಿಜೆಪಿ (77) ಹಾಗೂ ಜೆಡಿಯು (44) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.
  ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿಯವರ ಹಿಂದೂಸ್ತಾನಿ ಅವಾಮಿ ಮೋರ್ಚಾ ಹಾಗೂ ಓರ್ವ ಪಕ್ಷೇತರನ ಬೆಂಬಲ ಕೂಡಾ ಜೆಡಿಯುಗೆ ದೊರೆತಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 19 ಸಿಪಿಐಎಂ (ಎಲ್) 12 ಹಾಗೂ ಸಿಪಿಐ ಮತ್ತು ಸಿಪಿಎಂ ತಲಾ ಇಬ್ಬರು ಶಾಸಕರನ್ನು ಹೊಂದಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನ ಓರ್ವ ಶಾಸಕರಿದ್ದಾರೆ.


ಜೆಡಿಯುವನ್ನು ದುರ್ಬಲಗೊಳಿಸಲು
    ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ಮೊದಲು ನಿತೀಶ್ಕುಮಾರ್ ಅವರು ತನ್ನ ಅಧಿಕೃತ ನಿವಾಸದಲ್ಲಿ ಪಕ್ಷದ ಎಲ್ಲಾ ಸಂಸದರು ಹಾಗೂ ಶಾಸಕರ ಜೊತೆ ಮಾತುಕತೆಯನ್ನು ನಡೆಸಿದರು. ಬಿಜೆಪಿಯು ರಾಜ್ಯದಲ್ಲಿ ಜೆಡಿಯು ಪಕ್ಷವನ್ನುದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದವರು ಆರೋಪಿಸಿದರು. ಜೆಡಿಯುನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್.ಸಿ.ಪಿ.ಸಿಂಗ್ ಅವರ ಮೂಲಕ ಪಕ್ಷದಲ್ಲಿ ಬಂಡಾಯವೆಬ್ಬಿಸಲು ಬಿಜೆಪಿ ಯತ್ನಿಸಿತ್ತು ಎಂದವರು ಹೇಳಿದರು.
 ನಿತೀಶ್ ಕುಮಾರ್ ಅವರ ಸ್ಪಷ್ಟ ಒಪ್ಪಿಗೆ ಇಲ್ಲದ ಹೊರತಾಗಿಯೂ ಆರ್.ಸಿ.ಪಿ.ಸಿಂಗ್ ಅವರನ್ನು ಕೇಂದ್ರ ಸಂಪುಟ ಸಚಿವರನ್ನಾಗಿ ನಿಯೋಜಿಸಲಾಗಿತ್ತು.
 ತರುವಾಯ ರಾಜ್ಯಸಭಾ ಸದಸ್ಯರಾಗಿ ಆರ್.ಸಿ.ಪಿ.ಸಿಂಗ್ ಅಧಿಕಾರಾವಧಿ ಮುಗಿದ ಆನಂತರ ಜೆಡಿಯುವ ಅವರ ಸಂಸತ್ ಸದಸ್ಯತ್ವದ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದ್ದರಿಂದ, ಸಚಿವರಾಗಿ ಅವರ ಅಧಿಕಾರಾವಧಿ ಕೊನೆಗೊಂಡಿತ್ತು. ಈ ವಿದ್ಯಮಾನಗಳ ಬಳಿಕ ಸಿಂಗ್ ಅವರ ಬೆಂಬಲಿಗರು ಜೆಡಿಯು ವಿಭಜನೆಗೆ ಸಂಚುಹೂಡಿದ್ದಾರೆಂಬ ವದಂತಿಗಳು ಹರಿದಾಡಿದ್ದವು.

 ಮತ್ತೆ ಮಹಾಘಟಬಂಧನ್ನತ್ತೆ ನಿತೀಶ್

     2015ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ಕುಮಾರ್ ನೇತೃತ್ವದ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಮಹಾಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಆದರೆ 2017ರಲ್ಲಿ ಆರ್ಜೆಡಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗ, ಮಹಾಮೈತ್ರಿಕೂಟದಿಂದ ಹೊರಬಂದು ರಾಜೀನಾಮೆ ನೀಡಿದ್ದರು. ಆನಂತರ ಬಿಜೆಪಿ ಬೆಂಬಲದೊಂದಿಗೆ ನೂತನ ಸರಕಾರ ರಚಿಸಿದ್ದರು. ಇದೀಗ ನಿತೀಶ್ ಮತ್ತೆ ಮಹಾಮೈತ್ರಿಕೂಟವನ್ನು ಸೇರಿರುವುದು ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆಯೆನ್ನಲಾಗಿದೆ.

 ನೂತನ ಸಂಪುಟದಲ್ಲಿ ಆರ್ಜೆಡಿಗೆ ಗೃಹಖಾತೆ?
  ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಸರಕಾರ ರಚನೆಯಾದಲ್ಲಿ ಆರ್ಜೆಡಿಗೆ ಗೃಹ ಖಾತೆ ಹಾಗೂ ಸ್ಪೀಕರ್ ಹುದ್ದೆಯನ್ನು ನೀಡಬೇಕೆಂದು ತೇಜಸ್ವಿಯಾದವ್ ಬೇಡಿಕೆಯಿಟ್ಟಿದ್ದಾರೆನ್ನಲಾಗಿದೆ.

ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವುದಕ್ಕಾಗಿ ನಿತೀಶ್ಗೆ ಬೆಂಬಲ
   ಈ ಮಧ್ಯೆಕಾಂಗ್ರೆಸ್ ಪಕ್ಷವು ಹೇಳಿಕೆಯೊಂದನ್ನು ನೀಡಿ, ಬಿಹಾರದಲ್ಲಿ ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವುದಕ್ಕೆ ನೆರವಾಗಲು ಯಾವುದೇ ಬಿಜೆಪಿಯೇತರ ಸರಕಾರಕ್ಕೆ ತಾನು ಬೆಂಬಲ ನೀಡಲು ಸಿದ್ಧವಿರುವುದಾಗಿ ಕಾಂಗ್ರೆಸ್ ತಿಳಿಸಿದೆ. ನಿತೀಶ್ ಕುಮಾರ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ ಹಾಗೂ ರಾಹುಲ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಹಾಗೂ ತನಗೆ ಬೆಂಬಲ ಘೋಷಿಸಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆಂದು ಕಾಂಗ್ರೆಸ್ ಪಕ್ಷದ ಮೂಲಳು ತಿಳಿಸಿವೆ.

  ನಿತೀಶ್ ಕುಮಾರ್ ಅವರು ಬಿಹಾರದ ಜನತೆ ಹಾಗೂ ಬಿಜೆಪಿಗೆ ದ್ರೋಹ ಬಗೆದಿದ್ದಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಬಿಜೆಪಿ ಹಾಗೂ ಜೆಡಿಯುವ ಪರವಾಗಿ ಜನಾದೇಶ ದೊರೆತಿತ್ತು. ಬಿಜೆಪಿಯು ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಸಂಜಯ ಜೈಸ್ವಾಲ್
ಬಿಹಾರ ಬಿಜೆಪಿ ವರಿಷ್ಠ

ಮೆಯನ್ನು ಸಲ್ಲಿಸಿದ್ದಾರೆ. ಆ ಮೂಲಕ ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News