ಜೊತೆಯಾಗಿ ಕೋಚಿಂಗ್ ಗೆ ತೆರಳಿ ಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ತಾಯಿ, ಮಗ

Update: 2022-08-09 18:25 GMT
Photo: Manorama  

ಮಲಪ್ಪುರಂ: ಎನ್ ಬಿಂದು ತನ್ನ ಮಗ ವಿವೇಕ್‌ನೊಂದಿಗೆ ಪಿಎಸ್‌ಸಿ ಕೋಚಿಂಗ್ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದಾಗ ಸರ್ಕಾರಿ ಕೆಲಸ ಸಿಗುತ್ತದೆ ಎನ್ನುವುದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಇದೀಗ ತಾಯಿ-ಮಗ ಇಬ್ಬರೂ ತಮ್ಮ ನಿರಂತರ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾರೆ.  ವಿವೇಕ್ ಎಲ್‌ಡಿಸಿ ಪರೀಕ್ಷೆಯಲ್ಲಿ 38 ನೇ ರ್ಯಾಂಕ್ ಗಳಿಸಿದರೆ, ಬಿಂದು ಕೊನೆಯ ದರ್ಜೆಯ ಸೇವಕ ಪರೀಕ್ಷೆಯಲ್ಲಿ 92 ನೇ ರ್ಯಾಂಕ್ ಪಡೆದರು.

ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದ, ಬಿಂದು ಮತ್ತು ವಿವೇಕ್ ಮನೆಯಲ್ಲಿ ಪರಸ್ಪರ ತಮ್ಮ ಅನುಮಾನಗಳನ್ನು ಹಂಚಿಕೊಂಡು, ಟಿಪ್ಪಣಿಗಳನ್ನು  ವಿನಿಮಯ ಮಾಡಿಕೊಳ್ಳುತ್ತಿದ್ದರು. ವಿವೇಕ್ ಹತ್ತನೇ ತರಗತಿಗೆ ಪ್ರವೇಶಿಸಿದಾಗಿನಿಂದಲೇ ಬಿಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ಸಮೀಪದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಿಂದು ಅವರು ತಮ್ಮ ವೃತ್ತಿ ಹಾಗೂ ಮನೆಗೆಲಸಗಳನ್ನು ನಿಭಾಯಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರತಿನಿತ್ಯ ತಯಾರಾಗುತ್ತಿದ್ದರು.

ಇದನ್ನೂ ಓದಿ: ಚಹಾ ಎಲೆ ಕೀಳಿ ಮಕ್ಕಳನ್ನು ಪೋಷಿಸಿದ ತಾಯಿಯ ಮೂವರು ಮಕ್ಕಳಿಗೆ ಡಾಕ್ಟರೇಟ್

41ರ ಹರೆಯದ ಅವರಿಗೆ ಇದು ಕೊನೆಯ ಅವಕಾಶವಾದ್ದರಿಂದ ಉತ್ತಮ ಶ್ರೇಣಿಯೊಂದಿಗೆ ಸರ್ಕಾರಿ ನೌಕರಿ ಸಿಗುವ ತವಕದಲ್ಲಿದ್ದಾರೆ. ಈ ಹಿಂದೆ ಎಲ್‌ಜಿಎಸ್ ಮತ್ತು ಎಲ್‌ಡಿಸಿ ರ್ಯಾಂಕ್ ಪಟ್ಟಿಗೆ ಸೇರ್ಪಡೆಯಾಗಿದ್ದರೂ, ಅವರಿಗೆ ಉತ್ತಮ ಶ್ರೇಣಿ ಇರಲಿಲ್ಲ. ಆದಾಗ್ಯೂ, ಇದು ಬಿಂದು ಅವರನ್ನು ಇನ್ನಷ್ಟು ಕಠಿಣವಾಗಿ ಪ್ರಯತ್ನಿಸಲು ಒಂದು ತಡೆಯಾಗಲಿಲ್ಲ

ವಿವೇಕ್ ಕೂಡಾ ರ್ಯಾಂಕ್ ಪಟ್ಟಿಯಲ್ಲಿ ಪ್ರಭಾವಿ ಸ್ಥಾನವನ್ನು ಪಡೆಯಬಹುದೆಂಬ ಸಂಭ್ರಮದಲ್ಲಿದ್ದಾರೆ.   ಕೆಎಸ್‌ಆರ್‌ಟಿಸಿಯ ಎಡಪ್ಪಲ್ ಡಿಪೋದಲ್ಲಿ ಕೆಲಸ ಮಾಡುವ ಚಂದ್ರನ್ ಅವರ ಪತ್ನಿಯಾಗಿರುವ ಬಿಂದು 2019ರಲ್ಲಿ ರಾಜ್ಯದ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ ಪಡೆದಿದ್ದರು. ಈಗ ತಾಯಿ ಮತ್ತು ಮಗ ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬವಿದೆ.

ಕೃಪೆ: onmanorama.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News