ಬಳ್ಳಾರಿಯಲ್ಲಿ ಗಣಿಗಾರಿಕೆ ಪುನರಾರಂಭಿಸಲು ಸುಪ್ರೀಂ ಅನುಮತಿ ಕೋರಿದ ಜನಾರ್ದನ ರೆಡ್ಡಿ ಕಂಪೆನಿ

Update: 2022-08-09 18:09 GMT

ಹೊಸದಿಲ್ಲಿ, ಆ. 9: ಅರಣ್ಯ ಭೂಮಿ ಒತ್ತುವರಿ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ 2010ರಲ್ಲಿ ನಿಷೇಧಕ್ಕೊಳಗಾದ ಬಳ್ಳಾರಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಕಾರಿಕೆ ಪುನರಾರಂಭಿಸುವುದಕ್ಕೆ ತನಗೆ ಯಾವುದೇ ಅಭ್ಯಂತರ ಇಲ್ಲ ಎಂದು ಆಂಧ್ರಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಡೆಸಲಿದೆ. 
ಬಳ್ಳಾರಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್‌ನ ಅನುಮತಿ ಕೋರಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಾಲಕತ್ವದ ಓಬಲಾಪುರಂ ಗಣಿಗಾರಿಕೆ ಕಂಪೆನಿ ಮನವಿ ಸಲ್ಲಿಸಿತ್ತು. ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವಿನ ಗಡಿ ವಿವಾದದಿಂದ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ, ಈಗ ವಿವಾದ ಪರಿಹಾರವಾಗಿದೆ ಎಂದು ಕಂಪೆನಿ ಪ್ರತಿಪಾದಿಸಿದೆ. 

ಕೇಂದ್ರದ ಸಬಲೀಕರಣ ಸಮಿತಿ ಸಲ್ಲಿಸಿದ ವರದಿಯ ಆಧಾರದಲ್ಲಿ ಆಂಧ್ರಪ್ರದೇಶದ ಅನಂತಪುರ  ಜಿಲ್ಲೆಯ ಗಣಿಗಾರಿಕೆಯ ಮೇಲೆ ಸುಪ್ರೀಂ ಕೋರ್ಟ್ 2020 ಮಾರ್ಚ್‌ನಲ್ಲಿ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News