ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳದವರಿಗೆ ಸರಕಾರದ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

Update: 2022-08-13 11:39 GMT
ಸಾಂದರ್ಭಿಕ ಚಿತ್ರ

ಕೊಚ್ಚಿ: ಯಾವುದೇ ಧರ್ಮದ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳದ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್(Kerala High Court) ಶುಕ್ರವಾರ ಹೇಳಿದೆ.

"ಅವರು ಯಾವುದೇ ಧರ್ಮಕ್ಕೆ ಸೇರಿದವರಲ್ಲವೆಂಬ ಒಂದೇ ಕಾರಣಕ್ಕೆ ತನ್ನನ್ನು ಪ್ರಗತಿಪರ ಎಂದು ಹೇಳಿಕೊಳ್ಳುವ ಸರಕಾರ ಅಂತಹ ನಾಗರಿಕರಿಗೆ ಅವರಿಗೆ ದೊರೆಯಬೇಕಾದ ಸವಲತ್ತುಗಳನ್ನು ನಿರಾಕರಿಸಬಾರದು,'' ಎಂದು ಹೇಳಿದ ನ್ಯಾಯಾಲಯ ತಮ್ಮನ್ನು ಧರ್ಮಾತೀತ ಎಂದು ಗುರುತಿಸಿಕೊಂಡಿರುವ ಜನರಿಗೆ ಪ್ರಮಾಣಪತ್ರಗಳನ್ನು ನೀಡುವ ಕುರಿತಂತೆ ರಾಜ್ಯ ಸರಕಾರ ಒಂದು ನೀತಿ ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕು,'' ಎಂದು ಸೂಚಿಸಿದೆ.

ತಮ್ಮನ್ನು ಧರ್ಮಾತೀತ ವಿಭಾಗದವರು ಎಂದು ಗುರುತಿಸಿಕೊಂಡಿರುವ 12 ವಿದ್ಯಾರ್ಥಿಗಳು ತಮಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ದೊರೆಯುವ ಸೌಕರ್ಯಗಳಿಗೆ ಅರ್ಹರನ್ನಾಗಿಸಲು ಪ್ರಮಾಣಪತ್ರ ಒದಗಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.

ಈ ವಿದ್ಯಾರ್ಥಿಗಳಿಗೆ ಧರ್ಮೇತರ ವಿಭಾಗದಲ್ಲಿ ಪ್ರಮಾಣಪತ್ರ ನೀಡಿ ಅವರಿಗೆ ಪರಿಶಿಷ್ಟ ಜಾತಿ, ವರ್ಗ, ಇತರ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಇರುವ ಶೇ 10 ಮೀಸಲಾತಿ ಸವಲತ್ತು ಪಡೆಯಲು ಅನುಕೂಲ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:  'ಲಾಲ್ ಸಿಂಗ್ ಛಡ್ಡಾ' ಚಿತ್ರಕ್ಕೆ ಆಸ್ಕರ್ಸ್ ಅಧಿಕೃತ ಪುಟದಿಂದ ವಿಶೇಷ ರೀತಿಯ ಬೆಂಬಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News