2011ರ ಐಪಿಎಲ್ ವೇಳೆ ರಾಜಸ್ಥಾನ ಮಾಲಕರೊಬ್ಬರು ನನಗೆ ಕಪಾಳಮೋಕ್ಷ ಮಾಡಿದ್ದರು: ರಾಸ್ ಟೇಲರ್

Update: 2022-08-13 18:17 GMT
Photo:twitter 

ಹೊಸದಿಲ್ಲಿ, ಆ.13: ನ್ಯೂಝಿಲ್ಯಾಂಡ್‌ನ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಜನಾಂಗೀಯ ‘ಅಸಂವೇದನೆ’ಯನ್ನು ಬಹಿರಂಗಪಡಿಸಿದ ನಂತರ ಕಿವೀಸ್‌ನ ಮಾಜಿ ಬ್ಯಾಟರ್ ರಾಸ್ ಟೇಲರ್(former Kiwi batter Ross Taylor) ಅವರು ಐಪಿಎಲ್‌ನ (IPL)2011ರ ಋತುವಿನಲ್ಲಿ ರಾಜಸ್ಥಾನದ ರಾಯಲ್ಸ್ ಫ್ರಾಂಚೈಸಿಯ ಮಾಲಕರಲ್ಲಿ ಒಬ್ಬರು ನನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಟೇಲರ್ ತನ್ನ ಹೊಸ ಆತ್ಮಚರಿತ್ರೆ ‘ರಾಸ್ ಟೇಲರ್: ಬ್ಲಾಕ್ ಆ್ಯಂಡ್ ವೈಟ್’ನಲ್ಲಿ (Ross Taylor: Black & White)ಈ ಘಟನೆಯನ್ನು ಬಹಿರಂಗಪಡಿಸಿದರು. ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದ ಸೋಲಿನ ನಂತರ ಈ ಘಟನೆ ಸಂಭವಿಸಿತ್ತು ಎಂದು ಹೇಳಿದರು.

195 ರನ್ ಚೇಸಿಂಗ್ ಮಾಡುವಾಗ ನಾನು ಶೂನ್ಯಕ್ಕೆ ಔಟಾಗಿದ್ದೆ. ನಾವು ಆ ಗುರಿಯ ಹತ್ತಿರವೂ ತಲುಪಲಿಲ್ಲ. ಆ ನಂತರ ತಂಡ,ಸಹಾಯಕ ಸಿಬ್ಬಂದಿ ಹಾಗೂ ಮ್ಯಾನೇಜ್‌ಮೆಂಟ್ ಹೊಟೇಲ್‌ನ ಮೊದಲ ಮಹಡಿಯಲ್ಲಿದ್ದ ಬಾರ್‌ನಲ್ಲಿದ್ದರು. ಲಿಜ್ ಹರ್ಲಿ ಅವರು ವಾರ್ನಿ(ಶೇನ್ ವಾರ್ನ್)ಜೊತೆಗಿದ್ದರು. ‘‘ರಾಸ್, ಶೂನ್ಯಕ್ಕೆ ಔಟಾಗಲು ನಾವು ನಿಮಗೆ ಮಿಲಿಯನ್ ಡಾಲರ್ ಪಾವತಿಸಿದ್ದಲ್ಲ’’ ಎಂದು ರಾಜಸ್ಥಾನದ ರಾಯಲ್ಸ್ ಮಾಲಕರೊಬ್ಬರು ನನಗೆ ಹೇಳಿದರು. ಬಳಿಕ ನನ್ನ ಕಪಾಳಕ್ಕೆ 3-4 ಬಾರಿ ಬಾರಿಸಿದ್ದರು. ಬಳಿಕ ಅವರು ನಗುತ್ತಿದ್ದರು. ಇದು ನಾಟಕ-ನಟನೆ ಆಗಿತ್ತೇ ಎಂದು ಗೊತ್ತಿರಲಿಲ್ಲ. ಆ ಸಂದಭದಲ್ಲಿ ನಾನು ಅದನ್ನು ದೊಡ್ಡ ವಿಚಾರವನ್ನಾಗಿ ಮಾಡಲಿಲ್ಲ. ಆದರೆ, ವೃತ್ತಿಪರ ಕ್ರೀಡಾ ವಾತಾವರಣದಲ್ಲಿ ಇಂತಹದ್ದು ನಡೆಯುತ್ತದೆ ಎಂದು ನನಗೆ ಊಹಿಸಲು ಸಾಧ್ಯವಾಗಲಿಲ್ಲ ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News