ಪಂಜಾಬ್‌ನಲ್ಲಿ ನಾಲ್ವರು ಶಂಕಿತ ಉಗ್ರರ ಬಂಧನ

Update: 2022-08-14 18:27 GMT

ಚಂಡೀಗಡ,ಆ.14: ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ  ಮೂರು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಸುಧಾರಿತ ಸ್ಪೋಟಕ ಸಾಧನ (ಐಇಡಿ), ಎರಡು ಪಿಸ್ತೂಲ್‌ಗಳು ಹಾಗೂ 40 ಕಾಡತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

 ಪಂಜಾಬ್ ಪೊಲೀಸರು ಹಾಗೂ ದಿಲ್ಲಿ ಪೊಲೀಸರು ಜಂಟಿಯಾಗಿ  ಈ ದಾಳಿ ಕಾರ್ಯಾಚರಣೆ ನಡೆಸಿದ್ದರು.

‘‘ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ, ಪಂಜಾಬ್ ಪೊಲೀಸರು ದಿಲ್ಲಿ ಪೊಲೀಸರ ನೆರವಿನೊಂದಿಗೆ ಭಾರೀ ಭಯೋತ್ಪಾದನಾ ಸಂಚೊಂದನ್ನು ವಿಫಲಗೊಳಿಸಿದ್ದಾರೆ ಹಾಗೂ ಪಾಕ್-ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಘಟಕವೊಂದನ್ನು ಭೇದಿಸಿದ್ದಾರೆ.  ಕೆನಡಾದಲ್ಲಿ ನೆಲೆಸಿರುವ ಅರ್ಶ್‌ದಲ್ಲಾ ಹಾಗೂ ಆಸ್ಟ್ರೇಲಿಯಾ ಮೂಲದ ಗುರ್ಜಂತ್ ಸಿಂಗ್ ಜೊತೆ ನಂಟು ಹೊಂದಿರುವ ನಾಲ್ವರನ್ನು ಬಂಧಿಸಲಾಗಿದೆ ’’ ಎಂದು ಪಂಜಾಬ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

 ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪಂಜಾಬ್‌ನಾದ್ಯಂತ ಬಿಗಿಯಾದ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News