ಅತ್ಯಾಚಾರ ಆರೋಪ: ಗಾಯಕ ರಾಹುಲ್ ಜೈನ್ ವಿರುದ್ಧ ಪ್ರಕರಣ ದಾಖಲು

Update: 2022-08-15 18:30 GMT

ಮುಂಬೈ: ಮೂವತ್ತರ ಹರೆಯದ ವಸ್ತ್ರ ವಿನ್ಯಾಸಗಾರ್ತಿಯನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಬಾಲಿವುಡ್ ಗಾಯಕ ಹಾಗೂ ಸಂಯೋಜಕ ರಾಹುಲ್ ಜೈನ್ ಅವರ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ರಾಹುಲ್ ಜೈನ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಇದು  ಸುಳ್ಳು ಹಾಗೂ ಆಧಾರ ರಹಿತ ಎಂದು ಅವರು ಹೇಳಿದ್ದಾರೆ.

ಓಶಿವಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ದೂರಿನಲ್ಲಿ ನೀಡಿದ ಹೇಳಿಕೆಯಲ್ಲಿ ಯುವತಿ, ಜೈನ್ ಅವರು ಇನ್‌ಸ್ಟಾಗ್ರಾಂನಲ್ಲಿ ತನ್ನನ್ನು ಸಂಪರ್ಕಿಸಿದರು. ತನ್ನ ಕೆಲಸವನ್ನು ಪ್ರಶಂಸಿಸಿದರು. ಅಂಧೇರಿಯ ಉಪನಗರದಲ್ಲಿರುವ ಜೈನ್ ಅವರ ಫ್ಲ್ಯಾಟ್‌ಗೆ ಭೇಟಿ ನೀಡುವಂತೆ ತಿಳಿಸಿದರು. ತನ್ನನ್ನು ಖಾಸಗಿ ವಸ್ತ್ರ ವಿನ್ಯಾಸಗಾರ್ತಿಯಾಗಿ ನೇಮಕ ಮಾಡುವುದಾಗಿ ಭರವಸೆ ನೀಡಿದ್ದರು ಎಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾನು ವಿರೋಧಿಸಿದ ಹೊರತಾಗಿಯೂ ಜೈನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News