AIFF ಅಮಾನತುಗೊಳಿಸಿದ್ದನ್ನು ಫಿಫಾ ಹಿಂಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿ:ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

Update: 2022-08-17 06:44 GMT
Photo:PTI

ಹೊಸದಿಲ್ಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF)ಮೇಲೆ ಫಿಫಾ ಅಮಾನತನ್ನು ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕೆಂದು ಬುಧವಾರ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್(Supreme Court) ಆದೇಶಿಸಿದೆ.

ಫೆಡರೇಶನ್ ನಲ್ಲಿ ಮೂರನೇ ಪಕ್ಷಗಳ  ಅನಗತ್ಯ ಹಸ್ತಕ್ಷೇಪದ ಆರೋಪದ ಮೇಲೆ ಫಿಫಾ ಭಾರತದ ಪ್ರಮುಖ ಫುಟ್ಬಾಲ್ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ ಮರುದಿನ ಈ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ಆಲಿಸಿದೆ.

ಎಐಎಫ್ ಎಫ್ ಅಮಾನತಿನ ಬಳಿಕ ಸರಕಾರವು ಈಗಾಗಲೇ ಫಿಫಾದೊಂದಿಗೆ ಮಾತುಕತೆ ನಡೆಸಿದೆ ಎಂದು ಕೇಂದ್ರದ ಪರ ನ್ಯಾಯಾಲಯದಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

"ಎಸ್‌ಜಿ ಮೆಹ್ತಾ ಅವರ ಕೋರಿಕೆಯ ಮೇರೆಗೆ ಅಂಡರ್ 17 ವಿಶ್ವಕಪ್ ನಡೆಸುವ ಪರ ಸಕ್ರಿಯ ಪಾತ್ರವನ್ನು ವಹಿಸುವಂತೆ ನಾವು ಕೇಂದ್ರವನ್ನು ಕೇಳುತ್ತೇವೆ ಹಾಗೂ  AIFF ನ ಅಮಾನತು ತೆಗೆದುಹಾಕುವಿಕೆಯನ್ನು ಸುಲಭಗೊಳಿಸುವಂತೆ ನಾವು ಕೇಳುತ್ತೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಂಡರ್ 17 ಮಹಿಳಾ ವಿಶ್ವಕಪ್‌ನ ಆತಿಥ್ಯದಲ್ಲಿ ಭಾರತವು "ಪ್ರಯೋಜನವನ್ನು ಪಡೆಯಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

" ಅಂತಿಮ ಮಾರ್ಗವನ್ನು ಕಂಡುಕೊಳ್ಳಲು" ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಹಾಗೂ  ಚರ್ಚೆ ನಡೆಯುತ್ತಿದೆ ಎಂದು ಕೇಂದ್ರವು ಹೇಳಿದೆ ಹಾಗೂ  ಈ ವಿಷಯವನ್ನು ಸೋಮವಾರ ಆಗಸ್ಟ್ 22 ರವರೆಗೆ ಮುಂದೂಡಲು ವಿನಂತಿಸಿದೆ.

AIFF ತನ್ನ 85 ವರ್ಷಗಳ ಅಸ್ತಿತ್ವದಲ್ಲಿ FIFA ನಿಂದ ಇದೇ ಮೊದಲು ನಿಷೇಧಿಸಲ್ಪಟ್ಟಿದೆ.  ಎಐಎಫ್ ಎಫ್ ನಲ್ಲಿ   "FIFA ಕಾನೂನುಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ" ಎಂದು FIFA ಕೌನ್ಸಿಲ್‌ನ ಬ್ಯೂರೋ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News