ಲಕ್ನೋ: ಗೋದಾಮಿನಿಂದ 17 ಲಕ್ಷ ರೂ. ಮೌಲ್ಯದ ಕ್ಯಾಡ್‌ಬರಿ ಚಾಕಲೇಟ್ ಕಳವು

Update: 2022-08-17 18:02 GMT

ಲಕ್ನೋ, ಆ. 16: ಇಲ್ಲಿನ ಚಿನಹಟ್ ಗೋದಾಮಿನಿಂದ 17 ಲಕ್ಷ ರೂ. ಮೌಲ್ಯದ ಕ್ಯಾಡ್‌ಬರಿ ಚಾಕಲೇಟ್ ಬಾರ್‌ಗಳನ್ನು ಕಳವುಗೈಯಲಾಗಿದೆ. 

ಸೋಮವಾರ ಹಾಗೂ ಮಂಗಳವಾರದ ನಡುವಿನ ರಾತ್ರಿ ಈ ಕಳ್ಳತನ ನಡೆದಿದೆ. ಚಿನಹಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕ್ಯಾಡ್‌ಬರಿ ಗೋದಾಮು ಆಗಿ ಬಳಸುತ್ತಿರುವ ಮನೆಯೊಂದರಿಂದ ಕ್ಯಾಡ್‌ಬರಿ ಚಾಕಲೇಟ್ ಬಾರ್‌ಗಳನ್ನು ಕಳವುಗೈಯಲಾಗಿದೆ.

‘‘ನಾವು ಚಿನಹಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಯಾರಿಗಾದರೂ ಮಾಹಿತಿ ತಿಳಿದಿದ್ದರೆ, ಕೂಡಲೇ ತಿಳಿಸಿ’’ ಎಂದು ಕ್ಯಾಡ್‌ಬರಿ ಚಾಕಲೇಟ್ ಕಂಪೆನಿಯ ವಿತರಕ ರಾಜೇಂದ್ರ ಸಿಂಗ್ ಸಿಧು ಅವರು ತಿಳಿಸಿದ್ದಾರೆ.

ಚಿನಹಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಳಿವುಗಾಗಿ ಗೋದಾಮಿನ ಪರಿಸರದಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News