×
Ad

ನಿರುದ್ಯೋಗದ ವಿರುದ್ಧ ರೈತರ ಪ್ರತಿಭಟನೆ ಹಿನ್ನೆಲೆ: ದಿಲ್ಲಿ ಗಡಿಯಲ್ಲಿ ಭದ್ರತೆ ಹೆಚ್ಚಳ

Update: 2022-08-22 09:51 IST
ಸಾಂದರ್ಭಿಕ ಚಿತ್ರ, Photo:PTI 

ಹೊಸದಿಲ್ಲಿ: ನಿರುದ್ಯೋಗದ ವಿರುದ್ಧ ಜಂತರ್ ಮಂತರ್‌ನಲ್ಲಿ ರೈತರು ನಡೆಸಲಿರುವ ಪ್ರತಿಭಟನೆಗೆ(Farmers' Protest)  ಮುನ್ನ ದಿಲ್ಲಿ ಪೊಲೀಸರು ಸೋಮವಾರ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಸಿಂಘು ಹಾಗೂ  ಗಾಝಿಪುರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ(Security Stepped Up At Delhi Borders). ವಾಯುವ್ಯ ದಿಲ್ಲಿ ಹಾಗೂ ಗಾಝಿಪುರ ಗಡಿಯಲ್ಲಿರುವ ಸಿಂಘು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ಇದಕ್ಕೂ ಮೊದಲು, ರೈತರ ಪ್ರಮುಖ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಮ್ಮ ಬಾಕಿ ಇರುವ ಬೇಡಿಕೆಗಳನ್ನು ಒತ್ತಾಯಿಸಲು ಗುರುವಾರದಿಂದ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ 75 ಗಂಟೆಗಳ ಧರಣಿಯನ್ನು ಆರಂಭಿಸುವುದಾಗಿ ಘೋಷಿಸಿತ್ತು.

ಎಸ್ ಕೆ ಎಂ ಸುಮಾರು 40 ಕೃಷಿ ಸಂಸ್ಥೆಗಳನ್ನು ಒಳಗೊಂಡಿರುವ ಒಂದು ಗುಂಪಾಗಿದ್ದು, ಪ್ರಾಥಮಿಕವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (MSP) ಸರಿಯಾದ ಅನುಷ್ಠಾನಕ್ಕೆ ಒತ್ತಾಯಿಸುತ್ತದೆ.

ಎಪ್ರಿಲ್‌ನಲ್ಲಿ, ಕೇಂದ್ರದ ಭತ್ತ ಖರೀದಿ ನೀತಿಯನ್ನು ವಿರೋಧಿಸಿ ತೆಲಂಗಾಣ ನಾಯಕರು ಹೊಸದಿಲ್ಲಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು ಮತ್ತು ದೇಶದಲ್ಲಿ ಮತ್ತೊಂದು ಪ್ರತಿಭಟನೆಯ ಅಗತ್ಯವಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News