×
Ad

ಕೇಂದ್ರ ಗೃಹ ಸಚಿವ ಅಮಿತ್ ಶಾ-ನಟ ಜೂನಿಯರ್ ಎನ್‌ಟಿಆರ್ ಭೇಟಿ

Update: 2022-08-22 10:07 IST
Photo:twitter

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah ) ರವಿವಾರ ಸಂಜೆ ಹೈದರಾಬಾದ್‌ನಲ್ಲಿ ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ (Jr NTR ) ಅವರನ್ನು ಭೇಟಿಯಾದರು.

ತೆಲಂಗಾಣಕ್ಕೆ ಅಧಿಕೃತ ಭೇಟಿಯಲ್ಲಿರುವ ಶಾ, RRR ಚಲನಚಿತ್ರದ ಸ್ಟಾರ್ ಅನ್ನು "ತೆಲುಗು ಚಿತ್ರರಂಗದ ರತ್ನ" ಹಾಗೂ  "ಅತ್ಯಂತ ಪ್ರತಿಭಾವಂತ ನಟ" ಎಂದು ಹೊಗಳಿದ್ದಾರೆ.

"ಹೈದರಾಬಾದ್‌ನಲ್ಲಿ ಅತ್ಯಂತ ಪ್ರತಿಭಾವಂತ ನಟ ಮತ್ತು ನಮ್ಮ ತೆಲುಗು ಚಿತ್ರರಂಗದ ರತ್ನ ಜೂನಿಯರ್ NTR ಅವರೊಂದಿಗೆ ಉತ್ತಮ ಸಂವಾದವನ್ನು ನಡೆಸಿದ್ದೇನೆ" ಎಂದು  ಶಾ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ನಂದಮೂರಿ ತಾರಕ ರಾಮರಾವ್ ಜೂನಿಯರ್ ಅಥವಾ ಜೂನಿಯರ್ ಎನ್‌ಟಿಆರ್ ಅತ್ಯಂತ ಜನಪ್ರಿಯ ಭಾರತೀಯ ನಟರಾಗಿದ್ದು, ಅವರ ಇತ್ತೀಚಿನ ಚಲನಚಿತ್ರ RRR ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿತು.

 ಇದಕ್ಕೂ ಮೊದಲು ತನ್ನ ಒಂದು ದಿನದ ರಾಜ್ಯ ಭೇಟಿಯಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರಕಾರವು "ರೈತ ವಿರೋಧಿ" ಎಂದು ಆರೋಪಿಸಿದ ಶಾ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ  "ರೂ. 2 ಲಕ್ಷ ಕೋಟಿ" ಸಹಾಯ ನೀಡಿದ ಹೊರತಾಗಿಯೂ ರಾಜ್ಯವನ್ನು ಸಾಲದ ಬಿಕ್ಕಟ್ಟಿನಲ್ಲಿ ಮುಳುಗಿಸಿದ್ದಾರೆ ಎಂದು ಹೇಳಿದ್ದರು.

"ತೆಲಂಗಾಣದಲ್ಲಿ ಪ್ರತಿ ದಲಿತರ ಮನೆಗೆ ರೂ. 10 ಲಕ್ಷ ನೀಡುವುದಾಗಿ ಹಾಗೂ ರಾಜ್ಯದ ಪ್ರತಿಯೊಬ್ಬ ದಲಿತನಿಗೆ ಮೂರು ಎಕರೆ ಭೂಮಿ ಮತ್ತು ಪ್ರತಿ ಆದಿವಾಸಿಗಳಿಗೆ ಒಂದು ಎಕರೆ ಜಮೀನು ನೀಡುವುದಾಗಿ ತೆಲಂಗಾಣ ಜನತೆಗೆ ಭರವಸೆ ನೀಡಿದ್ದ ಕೆಸಿಆರ್ ಅವರು ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ'' ಎಂದು ಶಾ  ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ  ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News