ನಿಮ್ಮ ಉತ್ಸಾಹ ನನ್ನ ಮೇಲಿನ ಸಿಬಿಐ ಒತ್ತಡವನ್ನು ಹೆಚ್ಚಿಸುತ್ತಿದೆ: ಮನೀಶ್ ಸಿಸೋಡಿಯ
ಹೊಸದಿಲ್ಲಿ, ಆ. 23: ಆಮ್ ಆದ್ಮಿ ಪಕ್ಷಕ್ಕೆ ಜನ ಬೆಂಬಲ ಹೆಚ್ಚುತ್ತಿರುವುದರಿಂದ ಬಿಜೆಪಿ ನಮ್ಮನ್ನು ಗುರಿ ಮಾಡುತ್ತಿದೆ ಎಂದು ಗುಜರಾತ್‌ನ ಭಾವನಗರದಲ್ಲಿ ಮಂಗಳವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಎಎಪಿಯ ಮನೀಶ್ ಸಿಸೋಡಿಯಾ ಅವರು ಹೇಳಿದ್ದಾರೆ.
‘‘ನಿಮ್ಮ ಉತ್ಸಾಹ ನನ್ನ ಕುತ್ತಿಗೆಯ ಮೇಲಿನ ಹಿಡಿತವನ್ನು ಕೇಂದ್ರ ಸರಕಾರ ಬಿಗಿಗೊಳಿಸಲು ಕಾರಣವಾಗುತ್ತಿದೆ. ಆದರೆ, ನನ್ನ ಬಗ್ಗೆ ಚಿಂತಿಸಬೇಡಿ. ನಾನು ಪ್ರಾಮಾಣಿಕತೆಯ ಕತ್ತನ್ನು ಹೊಂದಿದ್ದೇನೆ’’ ಎಂದು ಅವರು ಹೇಳಿದ್ದಾರೆ.
‘‘ನಿರುದ್ಯೋಗ ಭಾರತದ ಅತಿ ದೊಡ್ಡ ಸಮಸ್ಯೆ. ಪದವಿ ಹೊಂದಿರುವ ಜನರು ನಿರುದ್ಯೋಗಿಗಳಾಗಿದ್ದಾರೆ. ಗುಜರಾತ್ ಯುವ ಜನರ ಅತಿ ದೊಡ್ಡ ಅಗತ್ಯ ಉದ್ಯೋಗ. ಉದ್ಯೋಗ ಇದೆ. ಆದರೆ, ಜನರು ಉದ್ಯೋಗದ ದಂಧೆ ನಡೆಸುತ್ತಿದ್ದಾರೆ. ಸರಕಾರಿ ಉದ್ಯೋಗಗಳಿಗೆ ನೇಮಕ ಮಾಡುತ್ತಿಲ್ಲ’’ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಅರವಿಂದ ಕೇಜ್ರಿವಾಲ್ ಅವರು ಮಾಡುತ್ತಿರುವ ದೊಡ್ಡ ಕೆಲಸವೆಂದರೆ ಯುವ ಜನರಿಗೆ ಉದ್ಯೋಗ ನೀಡುತ್ತಿರುವುದು. ನಾವು ದಿಲ್ಲಿಯಲ್ಲಿ ಯುವ ಜನರಿಗೆ 2 ಲಕ್ಷ ಸರಕಾರಿ ಉದ್ಯೋಗ, ಸರಕಾರಿ ಯೋಜನೆಗಳ ಮೂಲಕ 10 ಲಕ್ಷ ಖಾಸಗಿ ಉದ್ಯೋಗವನ್ನು ನೀಡಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ.