×
Ad

ಮನೀಶ್ ಸಿಸೋಡಿಯ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಈ.ಡಿ.

Update: 2022-08-23 23:38 IST

ಹೊಸದಿಲ್ಲಿ, ಆ. 23: ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಕುರಿತಂತೆ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇತರ ಹಲವರ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. 

ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿದ ಹಾಗೂ ಅಬಕಾರಿ ನೀತಿಯನ್ನು ತಿರುಚಿ ಅಕ್ರಮ ಹಣ ಸಂಪಾದಿಸಲಾಗಿದೆ ಎಂಬುದು ಸಾಕ್ಷ್ಯಗಳಿಂದ ಬಹಿರಂಗಗೊಂಡ ಬಳಿಕ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗುತ್ತಿದೆ. 
ದಿಲ್ಲಿ ಸರಕಾರದ ಅಬಕಾರಿ ನೀತಿ 2021-22 ಅನ್ನು ಅನುಷ್ಠಾನಗೊಳಿಸುವಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿದ 15 ಮಂದಿ ಹಾಗೂ ಸಂಸ್ಥೆಗಳಲ್ಲಿ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೂಡ ಸೇರಿದ್ದಾರೆ. 

ಸಿಬಿಐ ಕಳೆದ ವಾರ ಸಿಸೋಡಿಯ ಅವರ ನಿವಾಸ ಹಾಗೂ ಅಬಕಾರಿ ಆಯುಕ್ತ ಕೃಷ್ಣ, ಅಬಕಾರಿ ಇಲಾಖೆಯ ಇತರ ಇಬ್ಬರು ಅಧಿಕಾರಿಗಳು, ಉದ್ಯಮಿ ಸೇರಿದಂತೆ ಕೆಲವು ಅಧಿಕಾರಿಗಳಿಗೆ ಸೇರಿದ 31 ಸ್ಥಳಗಳ ಮೇಲೆ  ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News