ಕೇಜ್ರಿವಾಲ್ ಕರೆದ ಮಹತ್ವದ ಸಭೆಗೂ ಮುನ್ನ ಸಂಪರ್ಕ ಕಡಿದುಕೊಂಡ ಕನಿಷ್ಠ 12 ಎಎಪಿ ಶಾಸಕರು: ವರದಿ

Update: 2022-08-25 06:37 GMT
Photo:PTI

ಹೊಸದಿಲ್ಲಿ,:ಬಿಜೆಪಿಯ ‘ಆಪರೇಶನ್ ಕಮಲ’ದ ಪ್ರಯತ್ನಗಳ ಕುರಿತು ಚರ್ಚಿಸಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Delhi Chief Minister Arvind Kejriwal)ಗುರುವಾರ ತಮ್ಮ ನಿವಾಸದಲ್ಲಿ ಕರೆದಿರುವ ಮಹತ್ವದ ಸಭೆಗೆ ಮುನ್ನ ಕನಿಷ್ಠ ಹನ್ನೆರಡು ಎಎಪಿ ಶಾಸಕರು ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿರುವ ಸಭೆಗೆ ಆಮ್ ಆಮ್ ಪಕ್ಷದ (ಎಎಪಿ) ಎಲ್ಲಾ 62 ದಿಲ್ಲಿ ಶಾಸಕರನ್ನು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಪರ್ಕಕ್ಕೆ ಸಿಗದ ಶಾಸಕರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ ಮೂಲವೊಂದು, ‘ಮೊದಲು ಅವರು ನಮ್ಮ ಸಂಪರ್ಕಕ್ಕೆ ಬರಲಿ’ ಎಂದರು.

ಸಿಬಿಐ, ಈಡಿ ತನಿಖೆಗಳು, ತನ್ನ ಸಚಿವರನ್ನು ಗುರಿಯಾಗಿಸಿಕೊಂಡು ದಾಳಿಗಳು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡೆಸಿದ "ಆಪರೇಶನ್ ಕಮಲದ" ಪ್ರಯತ್ನಗಳ ಕುರಿತು ಎಎಪಿ ಸರ್ಕಾರವು ಶುಕ್ರವಾರ ದಿಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದೆ.

ಪಕ್ಷ ಬದಲಾಯಿಸುವ ಪ್ರಸ್ತಾಪದೊಂದಿಗೆ ತನ್ನ ಶಾಸಕರನ್ನು ಸಂಪರ್ಕಿಸಿದವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಎಎಪಿಗೆ ಬಿಜೆಪಿ ಸವಾಲು ಹಾಕಿದೆ ಮತ್ತು ಕೇಜ್ರಿವಾಲ್ ನೇತೃತ್ವದ ಪಕ್ಷವು ದಿಲ್ಲಿ ಸರಕಾರದ  “ಹಗರಣ”ದಿಂದ ಗಮನವನ್ನು ಬೇರೆಡೆ ಸೆಳೆಯಲು ಶ್ರಮಿಸುತ್ತಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News