ಟೈಲರ್ಸ್‌ಗಳ ಬೇಡಿಕೆಗಳ ಬಗ್ಗೆ ಧ್ವನಿ ಎತ್ತದಿದ್ದರೆ ಬೆಂಗಳೂರು ಚಲೋ: ಎಚ್ಚರಿಕೆ
ಉಡುಪಿ : ಟೈಲರ್ಸ್‌ಗಳ ವಿವಿಧ ಬೇಡಿಕೆಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿ ಈಡೇರಿಸು ವಂತೆ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿ ಎಚ್ಚರಿಸಿದೆ.
ಆ.26ರಂದು ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ಅವರ ನಿವಾಸ ದಲ್ಲಿ ಭೇಟಿ ಮಾಡಿ ಸಮಿತಿ ನಿಯೋಗ, ಟೈಲರ್ ಸಂಘಟನೆಯ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗೆ ಈಗಾಗಲೇ ಸಲ್ಲಿಸಿರುವ ಮನವಿಯ ಕುರಿತು ಮನವರಿಕೆ ಮಾಡಲಾಯಿತು.
ವಿಧಾನಸಭೆಯಲ್ಲಿ ನಮ್ಮ ಬೇಡಿಗಳ ಬಗ್ಗೆ ಚರ್ಚಿಸಬೇಕು. ಎಲ್ಲಾ ಶಾಸಕರು ಗಳು ಟೈಲರ್ಸ್‌ಗಳ ಬೇಡಿಕೆಯು ಈಡೇರುವಂತೆ ಧ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನ ಬೆಂಗಳೂರು ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗು ವುದು. ಒಂದು ವೇಳೆ ವಿಧಾನಸಭೆಯಲ್ಲಿ ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳ ಕುರಿತು ಭರವಸೆಯನ್ನು ನೀಡಿದರೆ ಹೋರಾಟವನ್ನು ರದ್ದುಪಡಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಟೈಲರ್ಸ್ ಬೇಡಿಕೆಗಳ ಬಗ್ಗೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾಯನ್ ಕೊರಂಗ್ರಪಾಡಿ, ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಂ.ಶೆಟ್ಟಿ, ರಾಜ್ಯ ಸಮಿತಿಯ ಕೋಶಾಧಿಕಾರಿ ಕೆ.ರಾಮಚಂದ್ರ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ಪ್ರಭು, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಮೀನಾಕ್ಷಿ ಆಚಾರ್ಯ, ದಿನೇಶ್ ಭಟ್, ಗಣೇಶ್ ಶೆಟ್ಟಿಗಾರ್, ಉಷಾ ಸೇರಿಗಾರ್, ಹರಿಶ್ಚಂದ್ರ ಆಚಾರ್ಯ, ಜಾನ್ ಮೆಂಡನ್ಸ, ರಾಘವೇಂದ್ರ ಗಾಣಿಗ, ಉಪೇಂದ್ರ ನಾಯಕ್, ಭುವನೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.