ನಾಯಕತ್ವ ತೊರೆದ ಬಳಿಕ ಕೊಹ್ಲಿ ಯಾರಿಂದ ಯಾವ ಸಂದೇಶ ಬಯಸಿದ್ದರು: ಸುನೀಲ್ ಗವಾಸ್ಕರ್

Update: 2022-09-06 09:21 GMT
Photo:PTI

ಹೊಸದಿಲ್ಲಿ: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೊರೆದಾಗ ತಮಗೆ ಯಾವ ಆಟಗಾರ ಸಂದೇಶ ಕಳುಹಿಸಬೇಕಿತ್ತು ಹಾಗೂ ಯಾವ ರೀತಿಯ ಸಂದೇಶವನ್ನು ತಾವು ಬಯಸಿದ್ದೀರಿ ಎನ್ನುವುದನ್ನು ವಿರಾಟ್ ಕೊಹ್ಲಿ (Virat Kohli )ಸ್ಪಷ್ಟಪಡಿಸಲಿ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ Former Indian cricket team captain Sunil Gavaskar ಹೇಳಿದ್ದಾರೆ.

ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಒಬ್ಬ ವ್ಯಕ್ತಿ ಮಾತ್ರ ನನಗೆ ಸಂದೇಶ ಕಳುಹಿಸಿದ್ದರು. ಅವರೇ ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ. ಧೋನಿ ಹೊರತುಪಡಿಸಿ ಬೇರೆ ಯಾರೂ ನನಗೆ ಸಂದೇಶ ಕಳುಹಿಸಲಿಲ್ಲ. ಹಲವರ ಬಳಿ ನನ್ನ ಮೊಬೈಲ್ ಫೋನ್ ನಂಬರ್ ಇದೆ. ಹಲವರು ಟಿವಿಯಲ್ಲಿ ಸಲಹೆ ನೀಡುತ್ತಾರೆ ಎಂದು ರವಿವಾರ ತನ್ನ ಭಾವನಾತ್ಮಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಈ ಕುರಿತು ಸ್ಪೋಟ್ಸ್ ತಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗವಾಸ್ಕರ್, ವಿರಾಟ್ ಯಾರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದರು ಎಂದು ಹೇಳುವುದು ಕಷ್ಟಕರ. ಕೊಹ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನಾದರೂ ಉಲ್ಲೇಖಿಸಿದ್ದರೆ ನೀವು ಅಂತವರ ಬಳಿ ಹೋಗಿ ಪ್ರಶ್ನಿಸಬಹುದು.  ಅವರನ್ನು ಸಂಪರ್ಕಿಸದ ವ್ಯಕ್ತಿಗಳ ಹೆಸರನ್ನು ಕೊಹ್ಲಿ ಬಹಿರಂಗಪಡಿಸಲಿ. ಡ್ರೆಸ್ಸಿಂಗ್ ಕೊಠಡಿಯೊಳಗಿನ ಪರಿಸ್ಥಿತಿ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಪ್ರಕಾರ ಧೋನಿ ಬಗ್ಗೆಯಷ್ಟೇ ಕೊಹ್ಲಿ ಮಾತನಾಡಿದ್ದಾರೆ. ಕೊಹ್ಲಿ ಏನು ಸಂದೇಶವನ್ನು ಬಯಸಿದ್ದರು? ಉತ್ತೇಜನದ ಮಾತುಗಳನ್ನೇ? ಹೌದಾಗಿದ್ದರೆ ಆಗ ಅವರು ನಾಯಕತ್ವ ತ್ಯಜಿಸಿ ಆಗಿತ್ತಲ್ಲವೇ? ಅಲ್ಲಿಗೆ ಅದು ಮುಗಿದ ಅಧ್ಯಾಯ. ಬಳಿಕ ಪ್ರೋತ್ಸಾಹದ ನುಡಿಗಳನ್ನು ಯಾಕಾಗಿ ಆಡಬೇಕು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News