ಪಾಕ್ ಆಟಗಾರರು ಕ್ಯಾಚ್ ಕೈಚೆಲ್ಲಿದ ವೀಡಿಯೋ ಬಳಸಿ ರಸ್ತೆ ಸುರಕ್ಷತಾ ಸಂದೇಶ ಸಾರಿದ ದಿಲ್ಲಿ ಪೊಲೀಸರು

Update: 2022-09-12 11:44 GMT

ಹೊಸದಿಲ್ಲಿ: ಅಪಘಾತಗಳನ್ನು ತಪ್ಪಿಸಲು ರಸ್ತೆಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕೆಂಬ ಜಾಗೃತಿ ಸಂದೇಶವನ್ನು ಪಸರಿಸುವ ತಮ್ಮ ಯತ್ನದ ಭಾಗವಾಗಿ ದಿಲ್ಲಿ ಪೊಲೀಸರು(Delhi Police) ರವಿವಾರ ಶ್ರೀಲಂಕಾ-ಪಾಕಿಸ್ತಾನ ನಡುವಿನ ಏಶ್ಯಕಪ್(Asia Cup 2022) ಫೈನಲ್ ಪಂದ್ಯದಲ್ಲಿನ ಪಾಕ್(Pakistan) ಆಟಗಾರರು ಕ್ಯಾಚ್ ಕೈಚೆಲ್ಲಿದ ವೀಡಿಯೋವೊಂದನ್ನು ಬಳಸಿದ್ದಾರೆ.

"ಏ ಭಾಯಿ, ಝರಾ ದೇಖ್ ಕೆ ಚಲೋ''(ಏ ಅಣ್ಣ, ಸ್ವಲ್ಪ ನೋಡಿಕೊಂಡು ಹೋಗು) ಎಂಬ ಶೀರ್ಷಿಕೆಯೊಂದಿಗೆ ಹಾಗೂ #RoadSafety #AsiaCup2022Final ಫೈನಲ್ ಹ್ಯಾಶ್‍ಟ್ಯಾಗ್‍ಗಳೊಂದಿಗೆ ದಿಲ್ಲಿ ಪೊಲೀಸರು ಈ ವೈರಲ್ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವೀಡಿಯೋದಲ್ಲಿ ಶ್ರೀಲಂಕಾ ಬ್ಯಾಟ್ಸ್ ಮ್ಯಾನ್ ಭನುಕಾ ರಾಜಪಕ್ಷ  ಅವರು ಆಡುತ್ತಿದ್ದ ವೇಳೆ ಲಂಕಾ ಇನ್ನಿಂಗ್ಸ್ ನ ಕೊನೆಯ ಬಾಲ್ ವೇಳೆ ಪಾಕ್ ಫೀಲ್ಡರ್‍ಗಳಾದ ಶದಬ್ ಖಾನ್ ಮತ್ತು ಆಸಿಫ್ ಅಲಿ ಕ್ಯಾಚ್ ಹಿಡಿಯುವ ಭರದಲ್ಲಿ ಪರಸ್ಪರ ಢಿಕ್ಕಿ ಹೊಡೆಯುವುದು ಕಾಣಿಸುತ್ತದೆ. ಈ ಮಿಸ್ಡ್ ಕ್ಯಾಚ್ ಅಂತಿಮವಾಗಿ ಶ್ರೀಲಂಕಾಗೆ ಆರು ರನ್‍ಗಳನ್ನು ಒದಗಿಸಿತ್ತು.

ಇದರ ಜೊತೆಗೆ 1970ರ ಹಿಟ್ ಚಿತ್ರ, ರಾಜ್‍ಕಪೂರ್ ಅಭಿನಯದ 'ಮೇರಾ ನಾಮ್ ಜೋಕರ್' ನ  'ಏ ಭಾಯಿ ಝರಾ ದೇಖ್ ಕೆ ಚಲೋ' ಹಾಡನ್ನೂ ದಿಲ್ಲಿ ಪೊಲೀಸರು ಬಳಸಿದ್ದಾರೆ.

ಈ ಪೋಸ್ಟ್ ಅನ್ನು 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರಲ್ಲದೆ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ ಹಾಗೂ ಕುತೂಹಲಕಾರಿ ಕಾಮೆಂಟ್‍ಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ: ಭಾರತದಲ್ಲಿ ಬೆಲೆ ಪರಿಷ್ಕರಣೆಯಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News