×
Ad

ಸುಪ್ರೀಂ, ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಏರಿಕೆಗೆ ಬಾರ್ ಕೌನ್ಸಿಲ್‌ಗಳ ಒಲವು

Update: 2022-09-15 23:28 IST
ಸುಪ್ರೀಂಕೋರ್ಟ್

ಹೊಸದಿಲ್ಲಿ, ಸೆ. 15: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು 67 ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಕೆ ಮಾಡಲು ಸಾಂವಿಧಾನಿಕ ತಿದ್ದುಪಡಿಗೆ ರಾಜ್ಯ ಬಾರ್ ಕೌನ್ಸಿಲ್ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಒಲವು ವ್ಯಕ್ತಪಡಿಸಿದೆ.

ಪ್ರಸ್ತುತ ದಿಲ್ಲಿ ನ್ಯಾಯಾಧೀಶರ ನಿವೃತ್ತಿ ವಯಸ್ಸು 62 ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು 65. ಕಳೆದ ವಾರ ನಡೆದ ಸಭೆಯಲ್ಲಿ ಕೌನ್ಸಿಲ್‌ಗಳ  ಸದಸ್ಯರು ವಿವಿಧ ಕಾಯ್ದೆಗಳ ತಿದ್ದುಪಡಿಗೆ ಪ್ರಸ್ತಾವ ಮಾಡುವ ನಿರ್ಧಾರ ತೆಗೆದುಕೊಂಡರು. ಇದರಿಂದ ಅನುಭವಿ ನ್ಯಾಯವಾದಿಗಳು ವಿವಿಧ ಆಯೋಗ ಹಾಗೂ ವೇದಿಕೆಗಳಿಗೆ ಅಧ್ಯಕ್ಷರಾಗಿ ನಿಯೋಜನೆಯಾಗಬಹುದು.

ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ಣಯದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಹಾಗೂ ನ್ಯಾಯ ಖಾತೆಯ ಸಚಿವ ಕಿರಣ್ ರಿಜಿಜು ಅವರಿಗೆ ಕಳುಹಿಸಲಾಗುವುದು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ. ಈ ಪ್ರಸ್ತಾವ ಅನುಮೋದನೆಯಾದರೆ, ಪ್ರಸಕ್ತ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿರುವ ಯು.ಯು. ಲಲಿತ್ ಅವರ ಅಧಿಕಾರಾವಧಿ 2 ವರ್ಷಗಳ ಕಾಲ ವಿಸ್ತರಣೆಯಾಗಲಿದೆ. ಅವರ ಪ್ರಸಕ್ತ ಅಧಿಕಾರಾವದಿ ಕೇವಲ 74 ದಿನಗಳು. ಅವರ ಅಧಿಕಾರಾವಧಿ ನವೆಂಬರ್ 8ರಂದು   ಅಂತ್ಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News