ಶಿರ್ವದ ವೈದ್ಯ ಡಾ.ಎನ್.ಎಸ್.ನಾಯಕ್ ನಿಧನ

Update: 2022-09-20 14:11 GMT

ಶಿರ್ವ, ಸೆ.20: ಶಿರ್ವದ ಹಿರಿಯ ಜನಪ್ರಿಯ ವೈದ್ಯ ಡಾ.ಎನ್.ಎಸ್. ನಾಯಕ್ (ನಗರ ಸೂರ್ಯನಾರಾಯಣ ನಾಯಕ್) ಸೋಮವಾರ ರಾತ್ರಿ  ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು.

ಸುಮಾರು 45 ವರ್ಷಗಳಿಂದ ಶಿರ್ವದಲ್ಲಿ ನಾಯಕ್ ನರ್ಸಿಂಗ್ ಹೋಮ್ ಸ್ಥಾಪಿಸಿ ಗ್ರಾಮೀಣ ಭಾಗದ ಬಡ ಜನರಿಗೆ ವೈದ್ಯಕೀಯ ಸೇವೆ ನೀಡಿ ಜನಾನು ರಾಗಿಯಾಗಿದ್ದರು. ಶಿರ್ವ ಶ್ರೀಮಹಾಲಸಾ ನಾರಾಯಣೀ ದೇವಳದ ಜೀರ್ಣೋ ದ್ಧಾರ ಸಮಿತಿಯ ಪ್ರಮುಖರು, ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಶಿರ್ವ ಯಂಗ್‌ಮೆನ್ಸ್ ಸ್ಪೋರ್ಟ್ ಅಂಡ್ ಕಲ್ಚರಲ್ ಅಸೋಸಿಯೇಶನ್,  ಶಿರ್ವ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ ರಾಗಿದ್ದ ಇವರು, ಸಮಾಜದ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಇವರು ಪತ್ನಿ, ಮೂವರು ವೈದ್ಯೆ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News