ಮೊದಲ ಟ್ವೆಂಟಿ-20: ಆಸ್ಟ್ರೇಲಿಯಕ್ಕೆ 209 ರನ್ ಗುರಿ ನೀಡಿದ ಭಾರತ

Update: 2022-09-20 16:46 GMT
Photo:AFP

 ಮೊಹಾಲಿ, ಸೆ.20: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (ಔಟಾಗದೆ 71 ರನ್, 30 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್(55 ರನ್,35 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯ ತಂಡಕ್ಕೆ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ಗೆಲುವಿಗೆ 209 ರನ್ ಗುರಿ ನೀಡಿದೆ.

ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಗ್ರೀನ್ ಎಸೆದ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪಾಂಡ್ಯ ಭಾರತದ ಸ್ಕೋರನ್ನು 208ಕ್ಕೆ ತಲುಪಿಸಿದರು.
  
 ಭಾರತವು 4.5 ಓವರ್‌ಗಳಲ್ಲಿ 35 ರನ್ ಗಳಿಸುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ(11 ರನ್) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ(2 ರನ್)ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಸೂರ್ಯಕುಮಾರ್ ಯಾದವ್‌ರೊಂದಿಗೆ 3ನೇ ವಿಕೆಟಿಗೆ 68 ರನ್ ಜೊತೆಯಾಟ ನಡೆಸಿದ ರಾಹುಲ್ ತಂಡವನ್ನು ಆಧರಿಸಿದರು.

ಹರ್ಷಲ್ ಪಟೇಲ್ ರೊಂದಿಗೆ 7ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 11 ಎಸೆತಗಳಲ್ಲಿ 32 ರನ್ ಸೇರಿಸಿದ ಹಾರ್ದಿಕ್ ಪಾಂಡ್ಯ ಭಾರತದ ಮೊತ್ತವನ್ನು ಹೆಚ್ಚಿಸಿದರು.

ಆಸ್ಟ್ರೇಲಿಯದ ಪರ ನಥಾನ್ ಎಲ್ಲಿಸ್(3-30) ಹಾಗೂ ಹೇಝಲ್‌ವುಡ್(2-39)ಐದು ವಿಕೆಟ್‌ಗಳನ್ನು ಹಂಚಿಕೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News