ಸಿದ್ದೀಕ್‌ ಕಪ್ಪನ್‌ ಶೂರಿಟಿಗೆ ಮುಂದೆ ಬಂದ ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ ರೇಖಾ ವರ್ಮಾ

Update: 2022-09-20 19:01 GMT
ಸಿದ್ದೀಕ್‌ ಕಪ್ಪನ್‌ / ರೂಪ ರೇಖಾ ವರ್ಮಾ(Photo: lucknowliteraryfestival.com)

ಲಖ್ನೋ: ಲಕ್ನೋ ಯುನಿವರ್ಸಿಟಿಯ ಮಾಜಿ ಉಪಕುಲಪತಿ ರೂಪ ರೇಖಾ ವರ್ಮಾ(Roop Rekha Verma) ಅವರು ಯುಎಪಿಎ(UAPA) ಪ್ರಕರಣದಲ್ಲಿ ಬಂಧಿತರಾಗಿರುವ ಸಿದ್ದೀಕ್ ಕಪ್ಪನ್(Siddique Kappan) ಅವರ ಜಾಮೀನುದಾರರಾಗಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ.  

ಕಪ್ಪನ್‌ ಅವರ ಬಿಡುಗಡೆಗೆ ನ್ಯಾಯಾಲಯದ ಷರತ್ತುಗಳನ್ನು ಪೂರೈಸಿ ಜಾಮೀನುದಾರರಾಗಿ ನಿಲ್ಲಲು ಇಬ್ಬರು ಸ್ಥಳೀಯ ಉತ್ತರ ಪ್ರದೇಶ ನಿವಾಸಿಗಳು ಅಗತ್ಯವಿತ್ತು. ಆದರೆ, ಜಾಮೀನಿಗೆ ಯಾರೂ ಸಿದ್ಧರಿರಲಿಲ್ಲ ಎಂದು ವರದಿಯಾಗಿದೆ.

ಕಪ್ಪನ್‌ ವಿರುದ್ಧದ ಪ್ರಕರಣ ಸೂಕ್ಷ್ಮವಾಗಿದ್ದರಿಂದ ಜಾಮೀನು ನಿಲ್ಲಲು ಯಾರೂ ಮುಂದೆ ಬರುತ್ತಿಲ್ಲ ಎಂದು ಕಪ್ಪನ್‌ ಪರ ವಕೀಲರು ಹೇಳಿದ್ದರು. 

ಈ ಹಿನ್ನೆಲೆಯಲ್ಲಿ 79 ವರ್ಷ ಪ್ರಾಯದ ರೇಖಾ ವರ್ಮಾ ಅವರು ಶ್ಯೂರಿಟಿ ನಿಲ್ಲಲು ಮುಂದೆ ಬಂದಿದ್ದಾರೆ. 

ಲೇಖಕಿಯೂ ಆಗಿರುವ ರೇಖಾ ವರ್ಮಾ ಅವರು ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣ , ಅಸಹಿಷ್ಣುತೆ ಮತ್ತು ಕೋಮುವಾದದ ವಿರುದ್ಧ ಜನರನ್ನು ಜಾಗೃತಿಗೊಳಿಸಲು ಬೀದಿಯಲ್ಲಿ ಕರಪತ್ರ ಹಂಚುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವೈರಲ್‌ ಆಗಿತ್ತು. ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿ ಸೌಹಾರ್ದ ಕಾಪಾಡುವಂತೆ ವಿನಂತಿಯನ್ನು ಅವರು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News