ಕಾಮಿಡಿಯನ್ ರಾಜು ಶ್ರೀವಾಸ್ತವ ನಿಧನ

Update: 2022-09-21 05:51 GMT
Photo:instagram

ಹೊಸದಿಲ್ಲಿ: ಹೃದಯ ಸ್ತಂಭನದಿಂದ ಆಸ್ಪತ್ರೆಗೆ ದಾಖಲಾಗಿದ್ದ ಒಂದು ತಿಂಗಳಿಗೂ ಅಧಿಕ ಸಮಯದ ನಂತರ ಕಾಮಿಡಿಯನ್  ರಾಜು ಶ್ರೀವಾಸ್ತವ ಅವರು (Comedian Raju Srivastava)ದಿಲ್ಲಿಯಲ್ಲಿ ಇಂದು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಆಗಸ್ಟ್ 10 ರಂದು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ  ಕುಸಿದು ಬಿದ್ದ ಶ್ರೀವಾಸ್ತವ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್) ದಾಖಲಿಸಲಾಯಿತು. ಅದೇ ದಿನ ಆಂಜಿಯೋಪ್ಲಾಸ್ಟಿ ಮಾಡಿಸಿ ವೆಂಟಿಲೇಟರ್  ವ್ಯವಸ್ಥೆಯಲ್ಲಿ ಇಡಲಾಗಿತ್ತು.

ಶ್ರೀವಾಸ್ತವ ಅವರು 1980 ರ ದಶಕದಿಂದಲೂ ಮನರಂಜನಾ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.  ಆದರೆ 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ "ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್" ನಲ್ಲಿ ಭಾಗವಹಿಸಿದ ನಂತರ ಹೆಚ್ಚು ಮನ್ನಣೆ ಪಡೆದರು.

ಶ್ರೀವಾಸ್ತವ ಅವರು "ಮೈನೆ ಪ್ಯಾರ್ ಕಿಯಾ", "ಬಾಝಿಗರ್", "ಬಾಂಬೆ ಟು ಗೋವಾ" ಹಾಗೂ "ಆಮ್ದಾನಿ ಅಥಾನಿ ಖರ್ಚಾ ರುಪೈಯಾ" ಮುಂತಾದ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮೂರನೇ  ಆವೃತ್ತಿಯ "ಬಿಗ್ ಬಾಸ್" ನಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News