ಮಹಾಮೈತ್ರಿಕೂಟ ರಾಷ್ಟ್ರಮಟ್ಟಕ್ಕೆ ವಿಸ್ತರಣೆ?

Update: 2022-09-23 05:41 GMT
Photo:PTI

ಪಾಟ್ನಾ: ಬಿಹಾರದ ಮಹಾಮೈತ್ರಿಕೂಟದ ಇಬ್ಬರು ಪ್ರಮುಖ ನಾಯಕರಾದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar)ಹಾಗೂ  ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಲಾಲು ಯಾದವ್ Rashtriya Janata Dal's Lalu Yadav ಅವರು ರವಿವಾರ ಸಂಜೆ ದಿಲ್ಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರು ವರ್ಷಗಳ ನಂತರ ಇದು ಅವರ ಮೊದಲ ಭೇಟಿಯಾಗಿದೆ. ರಾಹುಲ್ ಗಾಂಧಿ ಸಭೆಗೆ ಹಾಜರಾಗುತ್ತಾರೆ ಎಂದು ಬಿಹಾರದ ಇಬ್ಬರು ನಾಯಕರು ಆಶಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ರಾಹುಲ್ ಗಾಂಧಿಯವರು ಕೇರಳದಲ್ಲಿದ್ದಾರೆ. ಕಾಂಗ್ರೆಸ್‌ನ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ.

ನಿತೀಶ್ ಕುಮಾರ್ ಹಾಗೂ  ಸೋನಿಯಾ ಗಾಂಧಿ ಅವರು 2015 ರ ಬಿಹಾರ ಚುನಾವಣೆಯ ಮೊದಲು ಇಫ್ತಾರ್‌ ಕೂಟದಲ್ಲಿ ಕೊನೆಯ ಬಾರಿ ಭೇಟಿಯಾಗಿದ್ದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಈ ತಿಂಗಳ ಆರಂಭದಲ್ಲಿ ತಮ್ಮ ಕೊನೆಯ ದಿಲ್ಲಿ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಸೋನಿಯಾ ಗಾಂಧಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿದ್ದರು.

ಇದು ಸೌಜನ್ಯದ ಭೇಟಿ ಎಂದು ಮೂಲಗಳು ತಿಳಿಸಿವೆ. ಮಹಾಮೈತ್ರಿಕೂಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದು ಸೇರಿದಂತೆ ಕೆಲವು ಗಂಭೀರ ವಿಷಯಗಳ ಚರ್ಚೆ ಮಾಡುವ ಅವಕಾಶವೂ ಇದೆ ಎನ್ನಲಾಗಿದೆ.

ವಿಶೇಷವಾಗಿ 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ನಿತೀಶ್ ಕುಮಾರ್ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News