ಗಾಂಧಿ ಕುಟುಂಬದಿಂದ ಯಾರೂ ಪಕ್ಷದ ಮುಖ್ಯಸ್ಥರಾಗಬಾರದೆಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ: ಅಶೋಕ್ ಗೆಹ್ಲೋಟ್

Update: 2022-09-23 06:06 GMT

ಹೊಸದಿಲ್ಲಿ: "ಗಾಂಧಿ ಕುಟುಂಬದಿಂದ ಯಾರೂ ಪಕ್ಷದ ಮುಖ್ಯಸ್ಥರಾಗಬಾರದು ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ'' ಎಂದು ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot)ಇಂದು ಹೇಳಿದ್ದಾರೆ.

ಗೆಹ್ಲೋಟ್ ಅವರು  ರಾಹುಲ್ ಗಾಂಧಿ(Rahul Gandhi) ಅವರನ್ನು ಕೇರಳದಲ್ಲಿ ಭೇಟಿಯಾದರು.  ಅಲ್ಲಿ ಅವರು ನಿನ್ನೆ ಸಂಜೆ ಪಕ್ಷದ  "ಭಾರತ್ ಜೋಡೋ ಯಾತ್ರೆ" ಯಲ್ಲಿ ಪಾಲ್ಗೊಂಡರು.

"ಕಾಂಗ್ರೆಸ್ ಅಧ್ಯಕ್ಷರಾಗಿ ಮರಳುವ ಎಲ್ಲರ ಆಶಯವನ್ನು ಸ್ವೀಕರಿಸಲು ನಾನು ಅವರಿಗೆ ಹಲವಾರು ಬಾರಿ ವಿನಂತಿಸಿದ್ದೆ. ಗಾಂಧಿ ಕುಟುಂಬದ ಯಾರೂ ಮುಂದಿನ ಮುಖ್ಯಸ್ಥರಾಗಬಾರದು ಎಂದು ತಾನು ನಿರ್ಧರಿಸಿದ್ದೇನೆ ಎಂದು ಅವರು ನನಗೆ ಹೇಳಿದರು" ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.

" ನಮ್ಮ ಪಕ್ಷದವರೆಲ್ಲರೂ ನಾನು ಮುಖ್ಯಸ್ಥರಾಗಬೇಕೆಂದು ಬಯಸಿದ್ದಾರೆಂದು ನನಗೆ ಗೊತ್ತು.  ಅವರ ಆಶಯವನ್ನು ನಾನು ಗೌರವಿಸುತ್ತೇನೆ. ಆದರೆ ಗಾಂಧಿಯೇತರರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ಕಾರಣಕ್ಕೆ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆಂದು ರಾಹುಲ್ ಜೀ ನನಗೆ ತಿಳಿಸಿದರು" ಎಂದು ಗೆಹ್ಲೋಟ್ ಹೇಳಿದರು.

20 ವರ್ಷಗಳಲ್ಲಿ ಕಾಂಗ್ರೆಸ್ ತನ್ನ ಮೊದಲ ಗಾಂಧಿಯೇತರ ಮುಖ್ಯಸ್ಥರನ್ನ ಆಯ್ಕೆ ಮಾಡಲು  ತಯಾರಿ ನಡೆಸುತ್ತಿದ್ದು,  ಗೆಹ್ಲೋಟ್ ಈ ಪಾತ್ರಕ್ಕೆ ಗಾಂಧಿ ಕುಟುಂಬದ ಪ್ರಮುಖ ಆಯ್ಕೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News